ನಾನೇಕೆ ಕೊಹ್ನಿ, ಶರ್ಮಾರನ್ನು ಹೊಗಳಬಾರದು?: ಟೀಕಾರರ ವಿರುದ್ಧ ಕಿಡಿಕಾರಿದ ಶೋಯೆಬ್ ಅಖ್ತರ್

ನಾನೇಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಹೊಗಳಬಾರದು ಎಂದು ತಮ್ಮ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಿರುವ ಟೀಕಾಕಾರರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ನಾನೇಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಹೊಗಳಬಾರದು ಎಂದು ತಮ್ಮ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಿರುವ ಟೀಕಾಕಾರರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಇತ್ತೀಚೆಗಷ್ಟೇ ಶೋಯೆಬ್ ಅಖ್ತರ್ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರಿತ್ ಬುಮ್ರಾ ಅವರನ್ನು ಶ್ಲಾಘಿಸಿದ್ದರು. ಪ್ರಸ್ತುತ ಈ ಮೂವರೂ ಕ್ರಿಕೆಟಿಗರು ಕ್ರಮವಾಗಿ ತಮ್ಮ ತಮ್ಮ ವಿಭಾಗಗಳಲ್ಲಿ ಅತ್ಯುತ್ತಮವಾಗಿದ್ದಾರೆಂದು ಹೇಳಿದ್ದರು. ಇದಕ್ಕೆ ಪಾಕಿಸ್ತಾನಿಯರು ತೀವ್ರವಾಗಿ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಟೀಕಾಕಾರರ ವಿರುದ್ಧ ಕಿಡಿಕಾರಿರುವ ಅಖ್ತರ್ ಅವರು, "ವಿರಾಟ್‌ ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟಿಗರನ್ನು ಏಕೆ ಶ್ಲಾಘಿಸಬಾರದು? ಪಾಕಿಸ್ತಾನದಲ್ಲಿ ಅಥವಾ ಇಡೀ ವಿಶ್ವದಲ್ಲಿಯೇ ವಿರಾಟ್‌ ಕೊಹ್ಲಿ ಸಮೀಪ ನಿಲ್ಲುವ ಯಾರಾದರೂ ಆಟಗಾರರು ಇದ್ದಾರೆಯೇ? ಜನರು ಏಕೆ ಕೋಪಗೊಳ್ಳುತ್ತಾರೆ ಗೊತ್ತಿಲ್ಲ, ನನ್ನನ್ನು ಟೀಕಿಸುವುದಕ್ಕೂ ಮುನ್ನ ಅಂಕಿಅಂಶಗಳನ್ನು ಮೊದಲು ನೋಡಿ ಎಂದು ಹೇಳಿದ್ದಾರೆ. 

ಒಂದು ಕಾಲದಲ್ಲಿ ಪಾಕಿಸ್ತಾನದ ಆಟಗಾರರ ರೀತಿ, ಭಾರತೀಯ ಆಟಗಾರರು ಆಗಬೇಕೆಂದು ಬಯಸುತ್ತಿದ್ದರು. ಆದರೆ, ಇದೀಗ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ನಾನು ಯಾವ ಕಾರಣಕ್ಕಾಗಿ ಭಾರತೀಯ ಕ್ರಿಕೆಟಿಗರನ್ನು ಟೀಕಿಸಲಿ. ಪ್ರಸಕ್ತ ಕಾಲದಲ್ಲಿ ಅವರು ವಿಶ್ವ ಕ್ರಿಕೆಟ್'ಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿರುವಾದ ಟೀಕಿಸಲು ಕಾರಣವೇನಿದೆ? ಕೊಹ್ಲಿ ಸಾಮರ್ಥ್ಯದ ಬಗ್ಗೆ ಸಂಶಯವಿದ್ದರೆ ಆತನ ಅಂಕಿಅಂಶಗಳತ್ತ ಗಮನಹರಿಸಲಿ. ವಿರಾಟ್ ಕೊಹ್ಲಿ 70 ಶತಕಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಾರಿಸಿದ್ದಾರೆ. ವಿಶ್ವ ಕ್ರಿಕೆಟ್ ನಲ್ಲಿ ಸದ್ಯ ಬೇರೆ ಯಾವ ಆಟಗಾರ ಈ ಸಾಧನೆಯನ್ನು ಮಾಡಿದ್ದಾರೆ? ಭಾರತಕ್ಕಾಗಿ ಎಷ್ಟು ಸರಣಿಗಳನ್ನು ಕೊಹ್ಲಿ ಗೆದ್ದು ಕೊಟ್ಟಿದ್ದಾರೆ? ಆತನನ್ನು ನಾನು ಪ್ರಶಂಸಿಸಬಾರದಾ ಎಂದು ಪ್ರಶ್ನೆ ಹಾಕಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com