ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಪಡೆದಿದೆ: ಶಿಖರ್‌ ಧವನ್

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹದಿಮೂರನೇ ಆವೃತ್ತಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಯುಎಇನಲ್ಲಿ ನಡೆಯಲಿದ್ದು, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಎಂದು ಸ್ಟಾರ್‌ ಓಪನರ್‌ ಶಿಖರ್‌ ಧವನ್‌ ವಿಶ್ವಾಸ ಹೊರಹಾಕಿದ್ದಾರೆ.
ಶಿಖರ್ ಧವನ್
ಶಿಖರ್ ಧವನ್

ದುಬೈ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹದಿಮೂರನೇ ಆವೃತ್ತಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಯುಎಇನಲ್ಲಿ ನಡೆಯಲಿದ್ದು, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಎಂದು ಸ್ಟಾರ್‌ ಓಪನರ್‌ ಶಿಖರ್‌ ಧವನ್‌ ವಿಶ್ವಾಸ ಹೊರಹಾಕಿದ್ದಾರೆ.

"ಒಂದು ತಂಡವಾಗಿ ನಾವು ಈ ಟೂರ್ನಿಯನ್ನು ಎದುರು ನೋಡುತ್ತಿದ್ದೇವೆ. ಗೆಲ್ಲುವ ಆತ್ಮವಿಶ್ವಾಸವಿದ್ದು, ಸಹ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುತ್ತಿದ್ದೇವೆ. ನಮ್ಮ ತಂಡ ಉತ್ತಮ ಸಮತೋಲನ ಪಡೆದಿದ್ದು ಯುಎಇನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಈ ವರ್ಷ ಕಪ್‌ ಗೆಲ್ಲೋದು ನಾವೇ ಎಂಬ  ವಿಶ್ವಾಸವಿದೆ," ಎಂದು ಗಬ್ಬರ್‌ ಖ್ಯಾತಿಯ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಕಳೆದ 12 ಆವೃತ್ತಿಗಳಲ್ಲಿ ಸ್ಪರ್ಧಿಸಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಈ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್‌) ಕೂಡ ಒಂದು. ಆದರೆ ಕಳೆದ ವರ್ಷ ಯುವ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಸಾರಥ್ಯದಲ್ಲಿ ತಂಡ ನಾಕ್‌ಔಟ್‌ ಹಂತಕ್ಕೆ ಕಾಲಿಟ್ಟು ಗಮನ ಸೆಳೆದಿತ್ತು. ಇದೀಗ ತಂಡಕ್ಕೆ ಅನುಭವಿ  ಆಟಗಾರರ ಆಗಮನವಾಗಿದ್ದು ಅವರಿಂದ ಶ್ರೇಯಸ್‌ ಸಾಕಷ್ಟು ಕಲಿತುಕೊಳ್ಳಲಿದ್ದಾರೆ ಎಂದು ಧವನ್‌ ಅಭಿಪ್ರಾಯ ಪಟ್ಟಿದ್ದಾರೆ.

"ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಉತ್ತಮವಾಗಿ ನಾಯಕತ್ವವನ್ನು ನಿಭಾಯಿಸಿದ್ದಾರೆ. ಈಗ ರವಿಚಂದ್ರನ್ ಅಶ್ವಿನ್ ತಂಡ ಸೇರಿದ್ದು, ಅವರೊಟ್ಟಿಗೆ ಸಾಕಷ್ಟು ಅನುಭವ ತಂಡಕ್ಕೆ ಸಿಕ್ಕಂತಾಗಿದೆ. ಅಶ್ವಿನ್‌ ತಮ್ಮ ನಾಯಕತ್ವದ ಅನುಭವ ಹಂಚಿಕೊಳ್ಳುವುದರಿಂದ ತಂಡಕ್ಕೆ ಇದು ಲಾಭದಾಯಕವಾಗಲಿದೆ. ಅಂದಹಾಗೆ  ಶ್ರೇಯಸ್‌ ಹಿರಿಯರು ಮತ್ತು ಕಿರಿಯರಿಂದ ಕಲಿತುಕೊಳ್ಳುವುದರಲ್ಲಿ ಮುಕ್ತವಾಗಿದ್ದು, ತಂಡವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾರೆ," ಎಂದು ಶಿಖರ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com