ಸಿಎಸ್‌ಕೆ ಅಭ್ಯಾಸ ಪಂದ್ಯದಲ್ಲಿ ಧೋನಿ ದೈತ್ಯ ಸಿಕ್ಸರ್ ಗೆ‌ ದಂಗಾದ ಮುರಳಿ ವಿಜಯ್!ವಿಡಿಯೋ

ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪಂದ್ಯಗಳಿಂದ ಒಂದು ವರ್ಷದಿಂದ ದೂರವಿರಬಹುದು ಆದರೆ, 39 ವರ್ಷದ  ಆಟಗಾರನ ಪವರ್ ಪುಲ್ ಹೊಡೆತಗಳ ಬಗ್ಗೆ ಯಾರು ಕೂಡಾ ಎರಡು ಮಾತನಾಡುವಂತಿಲ್ಲ.
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
Updated on: 

ದುಬೈ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಪಂದ್ಯಗಳಿಂದ ಒಂದು ವರ್ಷದಿಂದ ದೂರವಿರಬಹುದು ಆದರೆ, 39 ವರ್ಷದ  ಆಟಗಾರನ ಪವರ್ ಪುಲ್ ಹೊಡೆತಗಳ ಬಗ್ಗೆ ಯಾರು ಕೂಡಾ ಎರಡು ಮಾತನಾಡುವಂತಿಲ್ಲ.

ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಧೋನಿ ಅವರ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಹಲವು ಮಂದಿ ಅನುಮಾನ ಹೊಂದಿದ್ದರು. ಆದರೆ,  ಸಿಎಸ್ ಕೆ ತಂಡ ಇಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹರಿಯಬಿಡುವ ಮೂಲಕ  ಅಂತಹ ಅನುಮಾನಗಳನ್ನು ಅಳಿಸಿಹಾಕಿದೆ.

ಸ್ಪೀನ್ ಬೌಲಿಂಗ್ ನಲ್ಲಿ ಚೆಂಡನ್ನು  ಮೈದಾನದಿಂದ ಹೊರಗೆ ಅಟ್ಟಿದ್ದಾರೆ. 35 ಸೆಕೆಂಡ್ ಗಳ ಈ ವಿಡಿಯೋದಲ್ಲಿ   ಅಭ್ಯಾಸ ಮಾಡುತ್ತಿರುವ ಅಂಗಳದಲ್ಲಿ ಎಂಎಸ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೆಂಡನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ. ಸಿಎಸ್ ಕೆ ತಂಡದ ಮ್ಯಾನೇಜರ್ ರಸೆಲ್ ರಾಧಕೃಷ್ಣನ್ ಈ ವಿಡಿಯೋವನ್ನು ದಾಖಲಿಸಿದ್ದಾರೆ.

ಮೈದಾನದ ತುದಿಯಲ್ಲಿದ್ದ ಮುರಳಿ ವಿಜಯ್ ಧೋನಿ ಸಿಕ್ಸರ್ ಕಂಡು ದಂಗಾಗಿದ್ದು, ಕ್ಯಾಮರಾದತ್ತ ನೋಡುತ್ತಾ. ಇದು ಪವರ್ ಪುಲ್ ಹೊಡೆತ ಎಂದಿದ್ದಾರೆ. 

ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದ ನಂತರ ಅಚ್ಚುಮೆಚ್ಚಿನ ಸೂಪರ್ ಸ್ಟಾರ್ ಧೋನಿ ಅವರ ಸಿಕ್ಸರ್ ನೋಡದಿದ್ದ ಅನೇಕ ಸಿಎಸ್ ಕೆ ಮತ್ತು ಧೋನಿ ಅಭಿಮಾನಿಗಳಿಗೆ ಈ ವಿಡಿಯೋ ಸಕತ್ ಖುಷಿ ಕೊಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com