ಶಿಖರ್ ಗಲ್ಲಿ ಕ್ರಿಕೆಟ್ ನ ಜಾಂಟಿ ರೋಡ್ಸ್: ಪಂತ್ ಹೇಳಿಕೆಗೆ ಧವನ್ ಪ್ರತಿಕ್ರಿಯೆ!

ಡ್ರೀಮ್ 11 ಐಪಿಎಲ್ -13 ಆವೃತ್ತಿ ಪ್ರೇಕ್ಷಕರಲ್ಲಿ ಅಷ್ಟೇ ಅಲ್ಲ, ಆಟಗಾರರಲ್ಲಿಯೂ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಶಿಖರ್ ಗೆ ಗಲ್ಲಿ ಕ್ರಿಕೆಟ್ ನ ಜಾಂಟಿ ರೋಡ್ಸ್ ಎಂದು ಹೇಳಿದ ಪಂತ್
ಶಿಖರ್ ಗೆ ಗಲ್ಲಿ ಕ್ರಿಕೆಟ್ ನ ಜಾಂಟಿ ರೋಡ್ಸ್ ಎಂದು ಹೇಳಿದ ಪಂತ್
Updated on: 

ನವದೆಹಲಿ: ಡ್ರೀಮ್ 11 ಐಪಿಎಲ್ -13 ಆವೃತ್ತಿ ಪ್ರೇಕ್ಷಕರಲ್ಲಿ ಅಷ್ಟೇ ಅಲ್ಲ, ಆಟಗಾರರಲ್ಲಿಯೂ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ದೆಹಲಿ ಕ್ಯಾಪಿಟಲ್ಸ್‌ನ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ ಮತ್ತು ಶಿಖರ್ ಧವನ್ ನಡುವೆ ಟ್ವಿಟರ್‌ನಲ್ಲಿ ನಡೆದ ಹಾಸ್ಯಭರಿತ ಸರಣಿಯಲ್ಲಿ ಕುತೂಹಲಕಾರಿ ಅಂಶ ಕಂಡು ಬಂದಿದೆ.

ಪಂತ್ ತಮ್ಮ ಟ್ವೀಟರ್ ಖಾತೆಯಲ್ಲಿ 20 ಸೆಕೆಂಡುಗಳ ವಿಡಿಯೋವನ್ನು ಹಾಕಿದ್ದಾರೆ. ಈ ಸಾಲಿಗೆ ಧವನ್ ಸಹ ಸೇರಿಕೊಂಡಿದ್ದಾರೆ. ಧವನ್ ಗಲ್ಲಿ ಕ್ರಿಕೆಟ್ ಆಡುತ್ತಿರುತ್ತಾರೆ ಮತ್ತು ಗಲ್ಲಿಯಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಂಡಿದ್ದಾರೆ. ಆದರೆ ಶಿಖರ್ ಎರಡೂ ಕೈಗಳನ್ನು ಹಿಡಿದಿರುವುದರಿಂದ ಈ ಕ್ಯಾಚ್ಕ್ಕೆ ಯಾವುದೇ ಮಾನ್ಯತೆ ಇಲ್ಲ. ಗಲ್ಲಿ ಕ್ರಿಕೆಟ್‌ನ ನಿಯಮಗಳ ಪ್ರಕಾರ, ಚೆಂಡು ಒಂದು ಬಾರಿ ನೆಲಕ್ಕೆ ತಾಗಿ ಬಂದರೆ, ಒಂದು ಕೈಯಿಂದ ಹಿಡಿಯಬೇಕು. ಇದನ್ನು ಬೀದಿ ಕ್ರಿಕೆಟ್‌ನಲ್ಲಿ ‘ಒನ್ ಟಿಪ್' ಎಂದು ಕರೆಯಲಾಗುತ್ತದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಪಂತ್, ಧವನ್ ಅವರನ್ನು ಗಲ್ಲಿ ಕ್ರಿಕೆಟ್ ನ ಜಾಂಟಿ ರೋಡ್ಸ್ ಎಂದು ಕಾಲೆಳೆದಿದ್ದಾರೆ. 

ಇದಕ್ಕೆ ತಕ್ಷಣವೇ ಪ್ರತಿಯಾಗಿ ಮತ್ತೊಂದು ವಿಡಿಯೋವನ್ನು ಧವನ್ ಅಪ್ ಲೋಡ್ ಮಾಡಿದ್ದಾರೆ. ರಿಷಭ್ ಪಂತ್ ಸಿಕ್ಸ್ ಹೊಡೆಯುತ್ತಾರೆ ಅದು ರೂಫ್ ಗೆ ಬಡಿದು ಫೀಲ್ಡರ್ ಕ್ಯಾಚ್ ಹಿಡಿದು ಪಂತ್ ಔಟ್ ಆಗುತ್ತಾರೆ. ಕ್ಯಾಚ್ ಹಿಡಿದ ಅಂಕಲ್ ಸಾಲಿಡ್ ಫೀಲ್ಡರ್ ಎಂದು ಧವನ್ ಬರೆದಿದ್ದಾರೆ. 

ಡ್ರೀಮ್ 11 ಐಪಿಎಲ್ -13 ಗಾಗಿ ಪ್ರಾರಂಭಿಸಲಾಗಿರುವ ಏ ಅಪ್ನಾ ಗೇಮ್ ಹೈ"Ye Apna Game Hain... ಪ್ರಚಾರದ ಭಾಗವಾಗಿ ಈ ಟ್ವೀಟ್ ಸರಣಿಯನ್ನು ಧವನ್-ಪಂತ್ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com