ಕೆಎಲ್ ರಾಹುಲ್
ಕೆಎಲ್ ರಾಹುಲ್

ಐಪಿಎಲ್ ಪಂದ್ಯದ ವೇಳೆ ಕನ್ನಡದಲ್ಲಿ ಕೆಟ್ಟ ಪದ ಬಳಸಿ ಬಾಯಿ ಮೇಲೆ ಕೈಯಿಟ್ಟ ಕೆಎಲ್ ರಾಹುಲ್, ವಿಡಿಯೋ!

ಐಪಿಎಲ್ 2020ರ 13ನೇ ಆವೃತ್ತಿಯಲ್ಲಿ ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವರು ಫೀಲ್ಡಿಂಗ್ ವೇಳೆ ಕೆಟ್ಟದ ಬಳಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
Published on

ದುಬೈ: ಐಪಿಎಲ್ 2020ರ 13ನೇ ಆವೃತ್ತಿಯಲ್ಲಿ ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವರು ಫೀಲ್ಡಿಂಗ್ ವೇಳೆ ಕೆಟ್ಟದ ಬಳಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಕಿಂಗ್ಸ್ ಇಲೆವೆನ್ ಪಂಜಾಬ್ ನಲ್ಲಿ ಕನ್ನಡಿಗ ಆಟಗಾರರು ಹೆಚ್ಚಾಗಿ ಇದ್ದಾರೆ. ಕರುಣ್ ನಾಯರ್, ಮಾಯಾಂಕ್ ಅಗರವಾಲ್ ಮತ್ತು ಕೃಷ್ಣಪ್ಪ ಗೌತಮ್ ಆಡುತ್ತಿದ್ದಾರೆ. ಇವರ ಪೈಕಿ ಯಾರೋ ಒಬ್ಬರಿಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಮುಂದೆ ಬಾರೋ ನನ್ನ ಲೌ.. ಎಂದು ಕರೆದಿದ್ದಾರೆ. 

ಕೆಎಲ್ ರಾಹುಲ್ ಕೆಟ್ಟ ಪದ ಬಳಸಿರುವುದು ಸ್ಟಂಪ್ ಮೈಕ್ ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಇನ್ನು ಕೆಎಲ್ ರಾಹುಲ್ ಕೆಟ್ಟ ಪದ ಬಳಸಿದ ಬಳಿಕ ಎಚ್ಚೇತ್ತು ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದಾರೆ.

ಒಟ್ಟಿನಲ್ಲಿ ಫೀಲ್ಡಿಂಗ್ ವೇಳೆ ಆಟಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಾಯಕ ಮಾಡಬೇಕು. ಆದರೆ ಇಲ್ಲಿ ಸಹ ಆಟಗಾರನಿಗೆ ಕೆಟ್ಟ ಪದಗಳನ್ನು ಬಳಸಿರುವುದಕ್ಕೆ ಅಭಿಮಾನಿಗಳು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com