ಸಂಜು ಸ್ಯಾಮ್ಸನ್‌ ಮುಂದಿನ ಧೋನಿ ಎಂದ ಶಶಿ ತರೂರ್‌ಗೆ ಗಂಭೀರ್ ತಿರುಗೇಟು!

ರಾಜಸ್ಥಾನ್‌ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್‌ ಅವರು ಮುಂದಿನ ಎಂಎಸ್‌ ಧೋನಿ ಎಂದ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿಕೆಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಭೀರ್‌ ತಿರುಗೇಟು ನೀಡಿದ್ದಾರೆ. ಸಂಜು ಸ್ಯಾಮ್ಸನ್‌ ಮುಂದೆ ಯಾರ ಸ್ಥಾನ ತುಂಬುವುದು ಬೇಡ ಎಂದು ಹೇಳಿದ್ದಾರೆ. 
ಸಂಜು-ಧೋನಿ-ಶಶಿ ತರೂರ್-ಗಂಭೀರ್
ಸಂಜು-ಧೋನಿ-ಶಶಿ ತರೂರ್-ಗಂಭೀರ್
Updated on: 

ನವದೆಹಲಿ: ರಾಜಸ್ಥಾನ್‌ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್‌ ಅವರು ಮುಂದಿನ ಎಂಎಸ್‌ ಧೋನಿ ಎಂದ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿಕೆಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಭೀರ್‌ ತಿರುಗೇಟು ನೀಡಿದ್ದಾರೆ. ಸಂಜು ಸ್ಯಾಮ್ಸನ್‌ ಮುಂದೆ ಯಾರ ಸ್ಥಾನ ತುಂಬುವುದು ಬೇಡ ಎಂದು ಹೇಳಿದ್ದಾರೆ. 

ಭಾನುವಾರ ರಾತ್ರಿ ಮುಕ್ತಾಯವಾಗಿದ್ದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ವಿರುದ್ಧ ಸಂಜು ಸ್ಯಾಮ್ಸನ್‌ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಈ ಪಂದ್ಯದ ಬಳಿಕ ಶಶಿ ತರೂರ್‌ ಕೇರಳ ಬ್ಯಾಟ್ಸ್‌ಮನ್‌ ಬಗ್ಗೆ ಈ ಹೇಳಿಕೆಯನ್ನು ನೀಡಿದರು. 

ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ 74 ರನ್‌ಗಳನ್ನು ಗಳಿಸಿದ್ದ ಸಂಜು ಸ್ಯಾಮ್ಸನ್‌, ಕಿಂಗ್ಸ್‌ ಇಲೆವೆನ್ ಪಂಜಾಬ್‌ ವಿರುದ್ಧ 224 ರನ್‌ಗಳ ಗುರಿ ಹಿಂಬಾಲಿಸುವಾಗ 85 ರನ್‌ಗಳನ್ನು ಸಿಡಿಸಿದರು. ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಗುರಿ ಬೆನ್ನತ್ತಿದ ತಂಡ ಎಂಬ ಸಾಧನೆಯನ್ನು ರಾಜಸ್ಥಾನ್‌ ರಾಯಲ್ಸ್ ಮಾಡಿದೆ.

ಪಂದ್ಯದ ಬಳಿಕ ಸಂಸದ ಶಶಿ ತರೂರ್‌ ಸಂಜು ಸ್ಯಾಮ್ಸನ್‌ ಅವರನ್ನು ಶ್ಲಾಘಿಸಿದರು ಹಾಗೂ ಬಲಗೈ 14ರ ವಯಸ್ಸಿನಲ್ಲಿದ್ದಾಗ ನೀವು ಎಂಎಸ್‌ ಧೋನಿ ಅವರ ರೀತಿ ಆಗುವೆ ಎಂದು ಹೇಳಿದ್ದ ಮಾತನ್ನು ನೆನಪಿಸಿಕೊಂಡರು ಹಾಗೂ ಇದು ಸತ್ಯವಾಗುತ್ತಿದೆ ಎಂದು ಟ್ವೀಟ್‌ ಮಾಡಿದ್ದರು.

ರಾಜಸ್ಥಾನ್‌ ರಾಯಲ್ಸ್‌ಗೆ ನಂಬಲಾಗದ ಗೆಲುವು! ಸಂಜು ಸ್ಯಾಮ್ಸನ್‌ 14ರ ವಯಸ್ಸಿನಲ್ಲಿದ್ದಾಗ ಅಂದರೆ ಒಂದು ದಶಕದ ಹಿಂದೆಯೇ ನೀವು ಮುಂದಿನ ಎಂಎಸ್‌ ಧೋನಿ ಆಗುವೆ ಎಂದು ಹೇಳಿದ್ದೆ. ಇದು ನಿಜವಾಗುತ್ತಿದೆ, ಇವರ ಅದ್ಭುತ ಇನಿಂಗ್ಸ್‌ಗಳಿಂದ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ ಆಗಮಿಸಿದ್ದಾರೆ ಎಂದು ಎಲ್ಲರಿಗೂ ತಿಳಿಯುತ್ತಿದೆ ಎಂದು ಶಶಿ ತರೂರ್‌ ಟ್ವೀಟ್‌ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗೌತಮ್‌ ಗಂಭೀರ್‌, "ಸಂಜು ಸ್ಯಾಮ್ಸನ್‌ ಅವರ ರೀತಿ ಆಗುವುದು ಬೇಡ. ಅವರು ಸಂಜು ಸ್ಯಾಮ್ಸನ್‌ ಅವರ ರೀತಿಯಲ್ಲೇ ಭಾರತೀಯ ಕ್ರಿಕೆಟ್‌ನಲ್ಲಿ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com