ಎಂಎಸ್ ಧೋನಿ ಅದ್ಭುತ ಪ್ರತಿಭೆ, ಇಷ್ಟು ಬೇಗ ನಿವೃತ್ತಿಗೆ ತಳ್ಳಬೇಡಿ: ನಾಸೀರ್ ಹುಸೇನ್

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಪ್ರತಿಭೆ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ.
ಕೊಹ್ಲಿ-ಎಂಎಸ್ ಧೋನಿ
ಕೊಹ್ಲಿ-ಎಂಎಸ್ ಧೋನಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಪ್ರತಿಭೆ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಎಂಎಸ್ ಧೋನಿ ಅವರು ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಬೇಕಾದರೆ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಹೇಳಿದ್ದರು. ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇದೀಗ ಐಪಿಎಲ್ ನಡೆಯುವುದೇ ಡೌಟ್ ಆಗಿದೆ. ಹೀಗಿರುವಾಗ ಧೋನಿಯ ಅವರ ಕ್ರಿಕೆಟ್ ಭವಿಷ್ಯ ಇನ್ನೂ ನಿಗೂಢವಾಗಿಯೇ ಇದೆ ನಾಸೀರ್ ಹುಸೇನ್ ಹೇಳಿದ್ದಾರೆ. 

ಸ್ಟಾರ್ ಸ್ಪೋರ್ಟ್ ಜತೆ ಮಾತನಾಡಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಎಂಎಸ್ ಧೋನಿ ಪರ ಬ್ಯಾಟ್ ಬೀಸಿದ್ದಾರೆ. ಧೋನಿ ಅವರನ್ನು ಸದ್ಯದ ಸ್ಥಿತಿಯಲ್ಲಿ ನಿವೃತ್ತಿಗೆ ತಳ್ಳುವುದು ಒಳ್ಳೆಯದಲ್ಲ. ಅವರು ಒಮ್ಮೆ ಹೋದರೆ ಮತ್ತೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com