ದಕ್ಷಿಣ ಆಫ್ರಿಕಾ-ಭಾರತ ಜಂಟಿ ತಂಡಕ್ಕೆ ಎಂಎಸ್ ಧೋನಿ ನಾಯಕ; ಇನ್ನೂ ಯಾರಿದ್ದಾರೆ ಗೊತ್ತೇ?

ವಿರಾಟ್ ಕೊಹ್ಲಿ-ಎಬಿಡಿ ವಿಲ್ಲರ್ಸ್ ಜೊತೆಗೂಡಿ ಭಾರತ-ದಕ್ಷಿಣ ಆಫ್ರಿಕಾ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು, ಮಹೇಂದ್ರ ಸಿಂಗ್ ಧೋನಿಯನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. 
ಕೊಹ್ಲಿ-ಧೋನಿ
ಕೊಹ್ಲಿ-ಧೋನಿ

ಬೆಂಗಳೂರು: ವಿರಾಟ್ ಕೊಹ್ಲಿ-ಎಬಿಡಿ ವಿಲ್ಲರ್ಸ್ ಜೊತೆಗೂಡಿ ಭಾರತ-ದಕ್ಷಿಣ ಆಫ್ರಿಕಾ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು, ಮಹೇಂದ್ರ ಸಿಂಗ್ ಧೋನಿಯನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿಡಿ ವಿಲ್ಲರ್ಸ್ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದರು. ರಾಯಲ್ ಚಾಲೆಂಜರ್ಸ್ ನ ಈ ಜೋಡಿ ಹಲವು ವಿಷಯಗಳ ಬಗ್ಗೆ ಮಾತನಾಡಿ, ಭಾರತ-ದಕ್ಷಿಣ ಆಫ್ರಿಕಾದ ಆಟಗಾರರನ್ನೊಳಗೊಂಡ ಏಕದಿನ ತಂಡವನ್ನು ರಚಿಸಲು ತೀರ್ಮಾನಿಸಿದರು. 

ಭಾರತ-ದಕ್ಷಿಣ ಆಫ್ರಿಕಾ ಆಟಗಾರರನ್ನೊಳಗೊಂಡ ತಂಡಕ್ಕೆ ಇಬ್ಬರೂ ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. 

ಜಂಟಿ ತಂಡದ ವಿವರ ಹೀಗಿದೆ: 
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿಡಿ ವಿಲ್ಲರ್ಸ್, ಜಾಕ್ವೆಸ್ ಕಾಲಿಸ್, ಎಂಎಸ್ ಧೋನಿ (ನಾಯಕ) ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್, ಡೇಲ್ ಸ್ಟೇನ್, ಜಸ್ಪ್ರೀತ್ ಬುಮ್ರಾ, ಕಗಿಸೊ ರಬಡಾ 

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಸಂಘಟನಾತ್ಮಕ ಕೆಲಸಗಳಿಗೆ ನೆರವಾಗಲು ಇಬ್ಬರೂ ದಿಗ್ಗಜ ಕ್ರಿಕೆಟಿಗರು 2016 ರ ತಮ್ಮ ಐಪಿಎಲ್ ಬ್ಯಾಟ್ ಗಳನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com