ಆಸಿಸ್ ವಿರುದ್ಧದ 99ರ ಅಡಿಲೇಡ್ ಟೆಸ್ಟ್ ನ ರೋಚಕ ಘಟನೆಯನ್ನು ಬಿಚ್ಚಿಟ್ಟ 'ಮಾಸ್ಟರ್ ಬ್ಲಾಸ್ಟರ್' ಸಚಿನ್!

ಆಸ್ಟ್ರೇಲಿಯಾ ವಿರುದ್ಧದ 1999ರ ಅಡಿಲೇಡ್ ಟೆಸ್ಟ್ ನಲ್ಲಿ ಆಸಿಸ್ ದಂತಕಥೆ ಮೆಗ್ರಾತ್ ವಿರುದ್ಧ ಮೇಲುಗೈ ಸಾಧಿಸಿದ್ದ ರೋಚಕ ಕ್ಷಣಗಳನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೆಲುಕು ಹಾಕಿದ್ದಾರೆ.

Published: 29th April 2020 01:36 AM  |   Last Updated: 29th April 2020 01:36 AM   |  A+A-


Sachin Tendulkar

ಸಂಗ್ರಹ ಚಿತ್ರ

Posted By : srinivasamurthy
Source : IANS

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 1999ರ ಅಡಿಲೇಡ್ ಟೆಸ್ಟ್ ನಲ್ಲಿ ಆಸಿಸ್ ದಂತಕಥೆ ಮೆಗ್ರಾತ್ ವಿರುದ್ಧ ಮೇಲುಗೈ ಸಾಧಿಸಿದ್ದ ರೋಚಕ ಕ್ಷಣಗಳನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೆಲುಕು ಹಾಕಿದ್ದಾರೆ.

ಬಿಸಿಸಿಐ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್ 1999ರಲ್ಲಿ ಅಡಿಲೇಡ್‌ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ನಡೆದ ಘಟನೆಯೊಂದನ್ನು ಸ್ಮರಿಸಿದ್ದು, ಅಂದು ಆಸ್ಟ್ರೇಲಿಯಾ ತಂಡದ ಅತ್ಯಂತ ಅನುಭವಿ ಹಾಗೂ  ಅಪಾಯಕಾರಿ ಬೌಲರ್‌ ಗ್ಲೆನ್‌ ಮೆಗ್ರಾತ್‌ ವಿರುದ್ಧ ಕ್ರಿಕೆಟ್‌ ಅಂಗಣದಲ್ಲಿ ನಡೆದಿದ್ದ ಚದುರಂಗದಾಟದ ರೋಚಕ ಕ್ಷಣಗಳನ್ನು ವಿವರಿಸಿದ್ದಾರೆ.

'1999ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಮ್ಮ ಮೊದಲ ಪಂದ್ಯ ಅಡಿಲೇಡ್‌ ಓವಲ್‌ನಲ್ಲಿ ನಡೆದಿತ್ತು. ಮೊದಲ ಇನಿಂಗ್ಸ್‌ ನಲ್ಲಿ ದಿನದಾಟದ ಅಂತ್ಯಕ್ಕೆ ಇನ್ನು 40 ನಿಮಿಷಗಳ ಆಟ ಬಾಕಿಯಿತ್ತು. ಗ್ಲೆನ್‌ ಮೆಗ್ರಾತ್‌ ಬೌಲಿಂಗ್‌ ಮಾಡಿ ನನ್ನೆದುರು 5-6 ಮೇಡಿನ್‌ ಓವರ್‌ಗಳನ್ನು ಎಸೆದಿದ್ದರು. ಅದು  ಅವರ ರಣತಂತ್ರ. ಸಚಿನ್‌ ಬೇಸತ್ತು ವಿಕೆಟ್‌ ಒಪ್ಪಿಸುವ ಹಾಗೆ ಮಾಡುವುದು. ಇದಕ್ಕಾಗಿ ಶೇ. 70 ಎಸೆತಗಳು ವಿಕೆಟ್‌ ಕೀಪರ್‌ ಗಿಲ್‌ಕ್ರಿಸ್ಟ್‌ ಕೈಗೆ ಸೇರಿಸಬೇಕು, ಶೇ. 10ರಷ್ಟು ಎಸೆತಗಳು ಮಾತ್ರ ಬ್ಯಾಟ್‌ ಸಮೀಪಕ್ಕೆ ಬರಬೇಕು. ಹೀಗಾಗಿ ಆಫ್‌ಸ್ಟಂಪ್‌ನ ಆಚೆ ಇರುವ ಚೆಂಡನ್ನು ಮುಟ್ಟಲು  ಪ್ರಯತ್ನಿಸಿದರೆ ಔಟ್ ಆಗುವ ಸಂಭವ ಹೆಚ್ಚಾಗಿತ್ತು. ಹಾಗಾಗಿದ್ದರೆ ಅವರ ರಣತಂತ್ರ ಫಲಿಸುತ್ತಿತ್ತು.

ಆದರೆ ನಾನು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಎಸೆತಗಳನ್ನು ಬಿಟ್ಟು ಆಡುತ್ತಿದ್ದೆ. ಈ ಮಧ್ಯೆ ಉತ್ತಮ ಎಸೆತಗಳಿಗೆ ನನ್ನ ಬಳಿ ಉತ್ತರವಿಲ್ಲದೆ ಚೆಂಡನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಉತ್ತಮ ಬೌಲಿಂಗ್‌ ಆದರೆ ನಾನಿನ್ನು ಇಲ್ಲೇ ಇದ್ದೇನೆ ಬೌಲಿಂಗ್‌ ಮಾಡಿ ಎಂದಿದ್ದೆ. ಮರುದಿನ ಎಲ್ಲವೂ  ಬದಲಾಯಿತು. ಹೊಸದಿನದಲ್ಲಿ ಮೆಗ್ರಾತ್‌ ಎದುರು ಹಲವು ಬೌಂಡರಿಗಳನ್ನು ಗಳಿಸಿದ್ದೆ ಎಂದು ಆಸೀಸ್‌ ಪಡೆ ಹೆಣೆದಿದ್ದ ಚದುರಂಗದ ಆಟವನ್ನು ತಾಳ್ಮೆಯಿಂದ ಗೆದ್ದ ಸಂಗತಿಯನ್ನು ಸಚಿನ್‌ ವಿವರಿಸಿದ್ದಾರೆ. 

ಅಂತೆಯೇ ಕಠಿಣ ಸಂದರ್ಭದಲ್ಲಿ ಮನಸ್ಸನ್ನು ಶಾಂತಚಿತ್ತದಿಂದ ಇಟ್ಟುಕೊಂಡಿರಬೇಕು, ಪರಿಸ್ಥಿತಿ ನಮ್ಮ ಪರವಾಗಿದ್ದಾಗ ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಚಿನ್ ಹೇಳಿದ್ದಾರೆ. ಅಂತೆಯೇ ಕ್ರಿಕೆಟ್ ನಿಂದ ದೂರ ಉಳಿದರೂ ಇಂತಹ ಕಾರ್ಯಕ್ರಮಗಳಿಂದ ತಮ್ಮ  ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp