ಬಿಸಿಸಿಐ ನಿಯಮ: 65 ವರ್ಷದ ಅರುಣ್ ಲಾಲ್ ಬಂಗಾಳ, 66 ವರ್ಷದ ವಾಟ್ಮೊರೆ ಬರೋಡಾ ತಂಡದ ತರಬೇತಿಗೆ ಅಲಭ್ಯ

ತರಬೇತಿ ಶಿಬಿರದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಾರದು ಎಂಬ ಬಿಸಿಸಿಐ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಪಶ್ಚಿಮ ಬಂಗಾಳ ಮತ್ತು ಬರೋಡ ತಂಡಗಳಲ್ಲಿ ಕೋಚ್ ಆಗಿರುವ ಅರುಣ್ ಲಾಲ್ ಮತ್ತು ಆಸ್ಟ್ರೇಲಿಯಾದ ದಾವ್ ವಾಟ್ಮೊರೆ ಮೇಲೆ ಪರಿಣಾಮ ಬೀರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತರಬೇತಿ ಶಿಬಿರದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಾರದು ಎಂಬ ಬಿಸಿಸಿಐ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಪಶ್ಚಿಮ ಬಂಗಾಳ ಮತ್ತು ಬರೋಡ ತಂಡಗಳಲ್ಲಿ ಕೋಚ್ ಆಗಿರುವ ಅರುಣ್ ಲಾಲ್ ಮತ್ತು ಆಸ್ಟ್ರೇಲಿಯಾದ ದಾವ್ ವಾಟ್ಮೊರೆ ಮೇಲೆ ಪರಿಣಾಮ ಬೀರಿದೆ.

ಕಳೆದ ಏಪ್ರಿಲ್ ನಲ್ಲಿ ನೇಮಕಗೊಂಡಿದ್ದ ವಾಟ್ಮೊರೆ 66 ವರ್ಷದವರಾಗಿದ್ದು ಇನ್ನು 65 ವರ್ಷದ ಅರುಣ್ ಲಾಲ್ ರಣಜಿ ಟ್ರೋಫಿ ಫೈನಲ್ ನಲ್ಲಿ ಬಂಗಾಳ ತಂಡಕ್ಕೆ ತರಬೇತಿ ನೀಡಿದ್ದರು.

60 ವರ್ಷಕ್ಕಿಂತ ಮೇಲ್ಪಟ್ಟ ಸಪೋರ್ಟ್ ಸ್ಟಾಫ್, ಅಂಪೈರ್ ಗಳು, ಗ್ರೌಂಡ್ ಸ್ಟಾಫ್ ಗಳು ಮತ್ತು ಸಕ್ಕರೆ ಕಾಯಿಲೆ, ರೋಗನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಿರುವವರು ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಅವರಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ 100 ಪುಟಗಳ ಎಸ್ ಒಪಿಯಲ್ಲಿ ವಿವರಿಸಲಾಗಿದ್ದು ಇದರ ಪ್ರತಿ ಪಿಟಿಐಗೆ ಲಭ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಸಿಸಿಐ ಹಿರಿಯ ಅಧಿಕಾರಿ, ಇದು ಸಂಸ್ಥೆಯ ಎಸ್ ಒಪಿಯಾಗಿದೆ. ಶಿಷ್ಠಾಚಾರಗಳನ್ನು ಮುರಿಯುವುದು ಯಾವುದೇ ತಂಡಕ್ಕೂ ಸಾಧ್ಯವಿಲ್ಲ. ಈ ಬಾರಿ ತರಬೇತಿ ಶಿಬಿರಕ್ಕೆ ಅರುಣ್ ಲಾಲ್ ಮತ್ತು ವಾಟ್ಮೊರೆಯಂಥವರು ಸಿಗದಿರುವುದು ದುರದೃಷ್ಟ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com