ಕೊಹ್ಲಿ-ಬಾಬರ್‌ ಬ್ಯಾಟಿಂಗ್‌ ಕಂಡರೆ ಟೀಂ ಇಂಡಿಯಾದ ಈ ದಿಗ್ಗಜ ಬ್ಯಾಟ್ಸ್ ಮನ್ ನೆನಪಿಗೆ ಬರುತ್ತಾರೆ: ಇಯಾನ್‌ ಬಿಷಪ್

24 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ನಿರ್ಮಿಸಿರುವ ಹಲವು ದಾಖಲೆಗಳು ಮುರಿಯದೇ ಉಳಿಯುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳ ಎದುರು ಸಚಿನ್‌ ಬಾರಿಸುತ್ತಿದ್ದ ಅದ್ಭುತ ಸ್ಟ್ರೈಟ್‌ ಡ್ರೈವ್‌ಗಳು ಈಗಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.
ಬಾಬರ್ ಅಜಾಂ-ವಿರಾಟ್ ಕೊಹ್ಲಿ
ಬಾಬರ್ ಅಜಾಂ-ವಿರಾಟ್ ಕೊಹ್ಲಿ

ನವದೆಹಲಿ: 24 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ನಿರ್ಮಿಸಿರುವ ಹಲವು ದಾಖಲೆಗಳು ಮುರಿಯದೇ ಉಳಿಯುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳ ಎದುರು ಸಚಿನ್‌ ಬಾರಿಸುತ್ತಿದ್ದ ಅದ್ಭುತ ಸ್ಟ್ರೈಟ್‌ ಡ್ರೈವ್‌ಗಳು ಈಗಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

ಅಂದಹಾಗೆ ಸಚಿನ್‌ ದಾಖಲೆಗಳನ್ನು ಮುರಿಯುವ ಬ್ಯಾಟ್ಸ್‌ಮನ್‌ ಯಾರು? ಎಂಬ ಪ್ರಶ್ನೆಗೆ ಕ್ರಿಕೆಟ್‌ ಜಗತ್ತು ಉತ್ತರ ಹುಡುಕುತ್ತಲೇ ಇದೆ. ಈ ನಡುವೆ ಹಲವು ಬ್ಯಾಟ್ಸ್‌ಮನ್‌ಗಳನ್ನು ಸಚಿನ್‌ಗೆ ಹೋಲಿಕೆ ಮಾಡಲಾಗಿದೆ. ಆದರೂ, ಕೆಲವೇ ಕೆಲ ಬ್ಯಾಟ್ಸ್‌ಮನ್‌ಗಳು ಮಾತ್ರವೇ ಭರವಸೆ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ವೇಗದ ಬೌಲರ್‌ ಇಯಾನ್‌ ಬಿಷಪ್, ಸಚಿನ್‌ ತೆಂಡೂಲ್ಕರ್‌ ರೀತಿ ಬ್ಯಾಟ್‌ ಮಾಡುವ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ್ದಾರೆ.

ಸಚಿನ್‌ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಕರೆದಿರುವ ಬಿಷಪ್‌, ವಿಕೆಟ್‌ ನೇರವಾಗಿ ಮಾಸ್ಟರ್‌ ಬ್ಲಾಸ್ಟರ್‌ ಆಡುತ್ತಿದ್ದ ಹೊಡೆತಗಳನ್ನು ನೆನೆದಿದ್ದಾರೆ. ಅಷ್ಟೇ ಅಲ್ಲದೆ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ರಾಜ್ಯಭಾರ ಮಾಡುತ್ತಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ಯುವ ಕಪ್ತಾನ ಬಾಬರ್‌ ಅಜಾಂ ಅವರಲ್ಲಿ ಮುಂದಿನ ಸಚಿನ್‌ ಆಗಬಲ್ಲ ಸಾಮರ್ಥ್ಯವಿದೆ ಎಂದಿದ್ದಾರೆ.

ವಿರಾಟ್‌ ಕೊಹ್ಲಿ ಮತ್ತು ಬಾಬರ್‌ ಆಝಮ್‌ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ನನಗೆ ಸಚಿನ್‌ ಬ್ಯಾಟಿಂಗ್‌ ನೆನಪಿಗೆ ಬರುವಂತೆ ಮಾಡುತ್ತಾರೆ. ಸಚಿನ್‌ ವಿಕೆಟ್‌ ನೇರವಾಗಿ ಅದ್ಭುತ ಹೊಡೆತಗಳನ್ನು ಆಡುತ್ತಿದ್ದರು. ಹೀಗಾಗಿ ಅವರೇ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬುದು ನನ್ನ ಅಭಿಪ್ರಾಯ. ಈಗಿನ ಕಾಲದಲ್ಲಿ ಕೊಹ್ಲಿ ಮತ್ತು ಬಾಬರ್‌ ಇದೇ ರೀತಿಯ ಬ್ಯಾಟಿಂಗ್‌ ಮಾಡುತ್ತಿದ್ದಾರೆ ಎಂದು ಬಿಷಪ್‌ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪಾಮಿ ಎಂಬಾಂಗ್ವಾ ಅವರೊಟ್ಟಿಗಿನ ಇನ್‌ಸ್ಟಾಗ್ರಾಮ್‌ ಲೈವ್‌ ವೇಳೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com