ಇಶಾಂತ್‌ ಶರ್ಮಾ ಫಿಟ್‌ ಇದ್ದರೆ ಆಸ್ಟ್ರೇಲಿಯಾಗೆ ಕಳುಹಿಸಿ: ಗವಾಸ್ಕರ್‌

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೆ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ವಿರಾಟ್‌ ಕೊಹ್ಲಿ ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗುವುದು ಈಗಾಗಲೇ ಎಲ್ಲರಿಗೂ ಗೊತ್ತು.
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೆ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ವಿರಾಟ್‌ ಕೊಹ್ಲಿ ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗುವುದು ಈಗಾಗಲೇ ಎಲ್ಲರಿಗೂ ಗೊತ್ತು. ಇನ್ನು, ಬ್ಯಾಟಿಂಗ್‌ ವೇಳೆ ಗಾಯಕ್ಕೆ ತುತ್ತಾಗಿರುವ  ಮೊಹಮ್ಮದ್‌ ಶಮಿ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ.

ಡೇ-ನೈಟ್‌ ಪಂದ್ಯದ ಆರಂಭಿಕ ಎರಡು ದಿನಗಳಲ್ಲಿ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಮುನ್ನಡೆ ಗಳಿಸಿತ್ತು. ಆದರೆ, ಮೂರನೇ ದಿನ ದ್ವಿತೀಯ ಇನಿಂಗ್ಸ್‌ ಟೀಮ್‌ ಇಂಡಿಯಾ ಕೇವಲ 36 ರನ್‌ಗಳಿಗೆ ಪತನವಾಗುವ ಮೂಲಕ ಹೀನಾಯವಾಗಿ ಸೋಲು  ಅನುಭವಿಸಿತ್ತು. ಇದೀಗ ಇನ್ನುಳಿದ ಮಹತ್ವದ ಮೂರು ಪಂದ್ಯಗಳಿಗೆ ಭಾರತಕ್ಕೆ ಕೊಹ್ಲಿ ಬದಲು ಹಾಗೂ ಮೊಹಮ್ಮದ್‌ ಶಮಿ ಬದಲು ಯಾರನ್ನು ಆಡಿಸುವುದು ಎಂಬ ತಲೆ ನೋವು ಶುರುವಾಗಿದೆ.

1974ರಲ್ಲಿ ಭಾರತ ತಂಡ ಟೆಸ್ಟ್ ಇನಿಂಗ್ಸ್‌ನಲ್ಲಿ 50 ರನ್‌ ಒಳಗೆ ಆಲೌಟ್‌ ಆಗಿತ್ತು. ಆದರೆ, ಶನಿವಾರ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕೊಹ್ಲಿ ಪಡೆ ಕುಸಿಯಿತು. ಟೀ ವಿರಾಮಕ್ಕೂ ಮುನ್ನ ಪಂದ್ಯ ಮುಗಿದಿತ್ತು. ಪಂದ್ಯ ಸೋಲುವುದರೊಂದಿಗೆ ಟೀಮ್‌ ಇಂಡಿಯಾ 0 -1 ಹಿನ್ನಡೆಯನ್ನು ಅನುಭವಿಸಿದೆ. ಟೆಸ್ಟ್ ಸರಣಿ ಗೆಲ್ಲಬೇಕಾದರೆ ಇನ್ನುಳಿದ ಮೂರು ಪಂದ್ಯಗಳಲ್ಲಿ ಭಾರತ ಗೆಲ್ಲುವುದು ಅನಿವಾರ್ಯವಾಗಿದೆ. 

ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡಿದ್ದು, ಸರಣಿಯಿಂದ ಶಮಿ ಹೊರಗುಳಿದಿದ್ದಾರೆ. ಇದು ಒಂದು ದೊಡ್ಡ ಸಮಸ್ಯೆ, ಅವರು ವಿಕೆಟ್ ತೆಗೆದುಕೊಳ್ಳುವ ಜಾಣ್ಮೆ ಹೊಂದಿದ್ದಾರೆ. ಅವರು ತಮ್ಮ ಬೌನ್ಸರ್ ಮತ್ತು ಯಾರ್ಕರ್ ಗಳೊಂದಿಗೆ  ಎದುರಾಳಿ ತಂಡಕ್ಕೆ ಭೀತಿ ಹುಟ್ಟಿಸಬಹುದು.ಅವರು ಆಡದಿದ್ದರೆ, ಅದು ಭಾರತಕ್ಕೆ ತೊಂದರೆಯಾಗಲಿದೆ'ಎಂದು ಗವಾಸ್ಕರ್ ಸ್ಪೋರ್ಟ್ಸ್ ತಕ್‌ಗೆ ತಿಳಿಸಿದರು.ಇಶಾಂತ್ ಶರ್ಮಾ ಫಿಟ್ ಆಗಿದ್ದರೆ, ಅವರನ್ನು ಈಗ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಸೂಚಿಸುತ್ತಿದ್ದೇನೆ.ಅವರು ದಿನದಲ್ಲಿ 20  ಓವರ್‌ಗಳನ್ನು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರೆ,ಮ್ಯಾನೇಜ್‌ಮೆಂಟ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕು, ಇದರಿಂದ ಅವರು ಸಿಡ್ನಿ ಟೆಸ್ಟ್‌ಗೆ ಸಿದ್ಧರಾಗಬಹುದು' ಎಂದು ಗವಾಸ್ಕಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com