ಮಂಧಾನ-ಶಫಾಲಿ ಭರ್ಜರಿ ಬ್ಯಾಟಿಂಗ್: ವನಿತೆಯರಿಗೆ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ

ಸ್ಮೃತಿ ಮಂಧಾನ (55 ರನ್) ಹಾಗೂ ಶಫಾಲಿ ವರ್ಮಾ(49 ರನ್) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಟಿ-20 ಮಹಿಳಾ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು. 
ಸ್ಮೃತಿ ಮಂಧಾನ
ಸ್ಮೃತಿ ಮಂಧಾನ

ಮೆಲ್ಬೋರ್ನ್:  ಸ್ಮೃತಿ ಮಂಧಾನ (55 ರನ್) ಹಾಗೂ ಶಫಾಲಿ ವರ್ಮಾ(49 ರನ್) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಟಿ-20 ಮಹಿಳಾ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 174 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲನೇ ವಿಕೆಟ್‌ಗೆ 85 ರನ್ ಗಳಿಸಿ ಭರ್ಜರಿ ಆರಂಭ ನೀಡಿತ್ತು.

ಸ್ಪೋಟಕ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 28 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 49 ರನ್ ಗಳಿಸಿದ್ದರು. ಆದರೆ, ಎಲಿಸ್ ಪೆರ್ರಿ ಅವರಿಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಸ್ಮೃತಿ ಮಂಧನಾ (55) ತನ್ನ 48 ಎಸೆತಗಳ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿ ಗಮನ ಸೆಳೆದರು

ಇನ್ನು ಟೀಂ ಇಂಡಿಯಾದ ಇನ್ನೋರ್ವ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಸಹ ಉತ್ತಮ ಪ್ರದರ್ಶನ ಕೊಟ್ಟಿದ್ದು  ಐದು ಬೌಂಡರಿಗಳೊಂದಿಗೆ 19 ಎಸೆತಗಳಲ್ಲಿ 30 ರನ್ ಗಳಿಸಿದರು. ಕೊನೆಯಲ್ಲಿ ನಾಯಕಿರ್ಮನ್‌ಪ್ರೀತ್ (20 ಎಸೆತಗಳಲ್ಲಿ 20) ಮತ್ತು ದೀಪ್ತಿ ಶರ್ಮಾ (4 ಎಸೆತಗಳಲ್ಲಿ 11) ತಂಡವನ್ನು ಗೆಲುವಿನ ಗುರಿ ತಲುಪಿಸಿದ್ದರು.

ಇದಕ್ಕೆ ಮುನ್ನ  ಟಾಸ್ ಗೆದ್ದು  ಆಸ್ಟ್ರೇಲಿಯಾ 5 ವಿಕೆಟ್‌ಗೆ 173 ರನ್ ಗಳಿಸಿ,ಭಾರತಕ್ಕೆ ಸವಾಲಿನ ಮೊತ್ತ ನೀಡಿದರೆ ಭಾರತವು 19.4 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 177 ರನ್ ಗಳಿಸಿ ಗುರಿಯನ್ನು ತಲುಪಿದೆ.

ಟೀಂ ಇಡಿಯಾದ  ದೀಪ್ತಿ ಶರ್ಮಾ (2/27) ಎರಡು ವಿಕೆಟ್ ರಾಜೇಶ್ವರಿ ಗಾಯಕ್ವಾಡ್ (1/34), ರಾಧಾ ಯಾದವ್ (1/34) ಮತ್ತು ಹರ್ಲೀನ್ ಡಿಯೋಲ್ (1/21) ತಲಾ ಒಂದು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಭಾರ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಂತರದ ಎರಡನೇ ಸ್ಥಾನಕ್ಕೆ ತಲುಪಿದೆ. 

ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿತ್ತು.ಭಾನುವಾರ ನಡೆಯಲಿರುವ ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ ಮಹಿಳೆಯರು: 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 173 (ಆಶ್ಲೀ ಗಾರ್ಡ್ನರ್ 93; ದೀಪ್ತಿ ಶರ್ಮಾ 2/27).
ಭಾರತ ಮಹಿಳೆಯರು: 19.4 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 177 (ಸ್ಮೃತಿ ಮಂಧನಾ 55, ಶಫಾಲಿ ವರ್ಮಾ 49; ಮೇಗನ್ ಶುಟ್ 1/26).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com