ಐಸಿಸಿ ಟಿ20 ಶ್ರೇಯಾಂಕದಲ್ಲಿ ಕುಸಿದ ಕೊಹ್ಲಿ!

ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 10 ನೇ ಸ್ಥಾನಕ್ಕೆ ಕುಸಿದಿದ್ದಾರೆ.

Published: 17th February 2020 05:10 PM  |   Last Updated: 17th February 2020 07:24 PM   |  A+A-


virat-kohli-slips-to-10th-kl-rahul-rohit-sharma-remain-static-in-icc-t20i-rankings

ಐಸಿಸಿ ಟಿ20 ಶ್ರೇಯಾಂಕದಲ್ಲಿ ಕುಸಿದ ಕೊಹ್ಲಿ!

Posted By : Srinivas Rao BV
Source : The New Indian Express

ದುಬೈ: ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 10 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಫೆ.17 ರಂದು ಪಟ್ಟಿ ಪ್ರಕಟಗೊಂಡಿದ್ದು, ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅನುಕ್ರಮವಾಗಿ 2 ಹಾಗೂ 11 ನೇ ಸ್ಥಾನದಲ್ಲಿದ್ದಾರೆ. 3 ಪಂದ್ಯಗಳ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ದ್ವಿಶತಕ ಸೇರಿ ಒಟ್ಟು 136 ರನ್ ಗಳನ್ನು ಗಳಿಸಿದ್ದ 

ಬ್ಯಾಟಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ನ ನಾಯಕ ಇಯಾನ್ ಮೋರ್ಗಾನ್ 687 ಅಂಕಗಳನ್ನು ಗಳಿಸಿ 9 ನೇ ಸ್ಥಾನಕ್ಕೆ ಏರಿದರು. ಪರಿಣಾಮ 673 ಅಂಕಗಳೊಂದಿಗಿರುವ ಕೊಹ್ಲಿ 10 ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ 662 ಅಂಕಗಳೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ. 

ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದ ವೇಗಿ ಜಸ್ಪ್ರಿತ್ ಬೂಮ್ರ 12 ನೇ ಸ್ಥಾನದಲ್ಲಿ ಸ್ಥಿರವಾಗಿದ್ದು ವೆಸ್ಟ್ ಇಂಡೀಸ್ ನ ಬೌಲರ್  ಶೆಲ್ಡನ್ ಕಾಟ್ರೆಲ್ ಜೊತೆ ಹಂಚಿಕೊಂಡಿದ್ದಾರೆ. 

ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ತಬ್ರೇಜ್ ಶಮ್ಸಿ ಟಾಪ್ 10 ರಲ್ಲಿದ್ದು, 8 ನೇ ಸ್ಥಾನ ಗಿಟ್ಟಿಸಿದ್ದಾರೆ. ಇನ್ನು ಆದಿಲ್ ರಶಿದ್ 6 ನೇ ಸ್ಥಾನದಲ್ಲಿದ್ದ ಆಂಡಿಲೆ ಫೆಹ್ಲುಕ್ವಾಯೊ ಅವರನ್ನು ಹಿಂದಿಕ್ಕಿ ಆ ಸ್ಥಾನವನ್ನು ಗಳಿಸಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp