ತಪ್ಪನ್ನು ತಪ್ಪು ಎನ್ನುವುದು ಆಕ್ರಮಣಕಾರಿಯಲ್ಲ: ಅಂಡರ್ 19 ಯುವ ಕ್ರಿಕೆಟಿಗರಿಗೆ ಸಚಿನ್ ಕಿವಿಮಾತು

ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ನಡೆದ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟಿಗರ ಗಲಾಟೆ ಪ್ರಕರಣ ಸಂಬಂಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಭಾರತ ಕಿರಿಯರಿಗೆ ಸಂಯಮ, ನಡುವಳಿಕೆ ಪಾಠ ಹೇಳಿಕೊಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ನಡೆದ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟಿಗರ ಗಲಾಟೆ ಪ್ರಕರಣ ಸಂಬಂಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಭಾರತ ಕಿರಿಯರಿಗೆ ಸಂಯಮ, ನಡುವಳಿಕೆ ಪಾಠ ಹೇಳಿಕೊಟ್ಟಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯವಾಗಿದ್ದ 19 ವಯೋಮಿತಿ ವಿಶ್ವಕಪ್ ಪೈನಲ್ ವೇಳೆ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ಆಟಗಾರರು ನಡೆದುಕೊಂಡ ರೀತಿಯನ್ನು ಕ್ರಿಕೆಟ್‌ ದೇವರು ಮತ್ತು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಭಾರತದ ಕಿರಿಯರು ತೋರಿದ ವರ್ತನೆಯನ್ನು ಬಲವಾಗಿ ಖಂಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಸಚಿನ್,"ಒಬ್ಬ ವ್ಯಕ್ತಿ   ಹಲವರಿಗೆ ಕಲಿಸುವ ಪ್ರಯತ್ನವನ್ನು ಮಾತ್ರ ಮಾಡಬಹುದು. ಆದರೆ, ನಂತರ ಆ ವ್ಯಕ್ತಿಯ ಪಾತ್ರ ಹಲವರಲ್ಲಿ ಅವಲಂಬಿಸಿರುತ್ತದೆ. ಒಂದು ಕ್ಷಣದಲ್ಲಿ, ಒಬ್ಬ ಕೆಲವು ವಿಷಯಗಳನ್ನು ನಿಯಂತ್ರಿಸಲು ಶಕ್ತನಾಗಿರಬೇಕು ಮತ್ತು ಇಡೀ ಪ್ರಪಂಚವು ನಿಮ್ಮನ್ನು ನೋಡುತ್ತಿದೆ ಎಂಬುದನ್ನು ಮರೆಯಬಾರದು. ಆಕ್ರಮಣವು ನಿಮ್ಮ ಆಟದಲ್ಲಿರಬೇಕು, ನೀವು ಬ್ಯಾಟ್ ಮಾಡುವ ಅಥವಾ ಬೌಲ್ ಮಾಡುವ ರೀತಿ-ಅದು ಆಕ್ರಮಣಶೀಲತೆ ತಂಡಕ್ಕೆ ಸಹಾಯ ಮಾಡುತ್ತದೆ ಮತ್ತು ಅದರ ವಿರುದ್ಧ ಹೋಗುವುದಿಲ್ಲ", ಎಂದು ಹೇಳಿದ್ದಾರೆ.

ಅಂತೆಯೇ 'ಎಲ್ಲರಲ್ಲೂ ಆಕ್ರಮಣಕಾರಿ ಪ್ರವೃತ್ತಿ ಇದ್ದೇ ಇರುತ್ತದೆ. ಯಾರಾದರೂ ಏನನ್ನೂ ಹೇಳದಿದ್ದರೆ ಅಥವಾ ಯಾರಾದರೂ ಏನನ್ನೂ ಮಾಡದಿದ್ದರೆ ಅವರಲ್ಲಿ ಆಕ್ರಮಣಕಾರಿ ಎಲ್ಲ ಎಂದು ಅರ್ಥವಲ್ಲ. ನಾವೆಲ್ಲರೂ ಹೊರಗೆ ಹೋಗಿ ಗೆಲ್ಲಲು ಬಯಸುತ್ತೇವೆ. ಅದನ್ನು ಪೂರ್ಣಗೊಳಿಸಲು ಒಂದು ವಿಧಾನವಿದೆ. ಯಾವುದೇ ಕಾರಣಕ್ಕೂ ಎಲ್ಲೆ ಮೀರುವಂತಿಲ್ಲ. ನನ್ನಂತೆಯೇ ಉಳಿದವರೂ ಗೆಲ್ಲಲು ಬಯಸುತ್ತಾರೆ.  ನಾವು ಅವುಗಳನ್ನು ನೆನಪಿನಲ್ಲಿಡಬೇಕು. ಟೆನಿಸ್ ದಂತಕತೆ ರೋಜರ್ ಫೆಡರರ್ ಆಕ್ರಮಣಕಾರಿ ಅಲ್ಲ ಎಂದು ನೀವು ಹೇಳಲು ಪ್ರಯತ್ನಿಸುತ್ತಿದ್ದೀರಾ? ಅವರು ಗೆಲ್ಲಲು ಬಯಸುವುದಿಲ್ಲವೇ? ಪ್ರತಿ ಹಂತದಲ್ಲೂ ಅವರು ಗೆಲುವು ಬಯಸುತ್ತಾರೆ. ಆದರೆ,  ಭಾಷೆ, ಅವರು ಏನು ಹೇಳುತ್ತಾರೆ ಮತ್ತು ನಡವಳಿಕೆ ನಿಜವಾಗಿಯೂ ಮುಖ್ಯವಾಗಿದೆ. ಅದು ನಿಜವಾಗಿಯೂ ಎಲ್ಲರಿಗೂ ಉದಾಹರಣೆಯಾಗಿದೆ "ಎಂದು ಸಚಿನ್ ತೆಂಡೂಲ್ಕರ್ ಕಿರಿಯರಿಗೆ ಪಾಠ ಮಾಡಿದರು.

ಕಳೆದ ತಿಂಗಳು ಸೆನ್ವೆಸ್ ಪಾರ್ಕ್‌ ಅಂಗಳದಲ್ಲಿ ಜರುಗಿದ್ದ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ವಿಕೆಟ್‌ಗಳಿಂದ(ಡಿಎಲ್‌ಎಸ್‌ ಮಾದರಿ) ಭಾರತವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಪಂದ್ಯದ ಬಳಿಕ ಉಭಯ ತಂಡಗಳ ಕೆಲ ಆಟಗಾರರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿತ್ತು. ಮಧ್ಯೆ ಪ್ರವೇಶಿಸಿದ್ದ ತೀರ್ಪುಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ನಂತರ, ಐಸಿಸಿ ಎರಡೂ ತಂಡಗಳ ಒಟ್ಟು ಐವರು ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಿತ್ತು. ಅಂದಿನ ಘಟನೆ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಬಾಂಗ್ಲಾದೇಶದ ತೌಹಿದ್ ಹೃದಾಯ್, ಶಮೀಮ್‌ ಹೊಸೈನ್ ಹಾಗೂ ರಕಿಬುಲ್ ಹಸನ್  ಮತ್ತು ಭಾರತದಿಂದ ಆಕಾಶ್‌ ಸಿಂಗ್ ಹಾಗೂ ರವಿ ಬಿಷ್ಣೋಯಿ ಒಟ್ಟು ಐವರು ಆಟಗಾರರ ಶಿಸ್ತು ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com