ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್

ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಜ.17ರಿಂದ ಫೆ.9ರವರೆಗೆ ನಡೆಯಲಿರುವ ಐಸಿಸಿ ಕಿರಿಯರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ತಂಡದಿಂದ ಯುವ ವೇಗಿ ನಸೀಮ್‌ ಶಾ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹಿಂಪಡೆದಿದೆ. ನವೆಂಬರ್ ನಲ್ಲಿ ನಾಸೀಮ್ ಪಾಕ್ ತಂಡದ ಪರ ಟೆಸ್ಟ್ ಆಡಿದ್ದಾರೆ. ಹೀಗಿದ್ದಾಗ ಅವರನ್ನು ಕಿರಿಯರ ತಂಡದಲ್ಲಿ ಆಡಿಸಲು ಆಗದು. ಪಾಕ್ ಮೊದಲು ಘೋಷಿಸಿದ ವಿಶ್ವಕಪ್ ತಂಡದಲ್ಲಿ ನಾಸೀಮ್ ಶಾ ಸ್ಥಾನ ಪಡೆದಿದ್ದರು.

ಪಾಕ್‌ ಟೆಸ್ಟ್‌ ತಂಡದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ವೇಗದ ಬೌಲರ್‌ ಆಗಿರುವ 16 ವರ್ಷದ ನಸೀಮ್‌ ಶಾ ಅವರ ಬದಲಾಗಿ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ವಸೀಂ ಜೂನಿರ್‌ ಆಡಲಿದ್ದಾರೆ ಎಂದು ಪಿಸಿಬಿ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಹಿರಿಯರ ತಂಡದಲ್ಲಿ ಈಗಾಗಲೇ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿರುವ ನಸೀಮ್‌ ಶಾ ಅವರ ಹೆಸರನ್ನು 19 ವರ್ಷದೊಳಗಿನ ವಿಶ್ವಕಪ್‌ನಲ್ಲಿ ಆಡಲಿರುವ ಪಾಕ್‌ ತಂಡದಲ್ಲಿ ಸೇರಿಸಲಾಗಿತ್ತು. ಪಾಕ್‌ ಹಿರಿಯರ ತಂಡದ ಪರ 3 ಟೆಸ್ಟ್‌ ಪಂದ್ಯಗಳನ್ನು ಆಡಿರುವ ನಸೀಮ್‌ ಶಾ, ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಪಡೆದ ಸಾಧನೆಯನ್ನೂ ಮಾಡಿದ್ದಾರೆ. 

"ಐಸಿಸಿ 19 ವರ್ಷದೊಳಗಿನ ವಿಶ್ವಕಪ್‌ ಟೂರ್ನಿಯು ಭವಿಷ್ಯದ ತಾರೆಗಳಿಗೆ ಅಡಿಗಲ್ಲಾಗಿದೆ. ಈ ವೇದಿಕೆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ಅವಕಾಶ ಪಡೆಯಲು ಯುವ ಆಟಗಾರರಿಗೆ ಉತ್ತಮ ಅವಕಾಶ ಲಭ್ಯವಾಗುತ್ತದೆ. ಆದರೆ ನಸೀಮ್‌ ಶಾ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪನ್ನು ಮೂಡಿಸಿಯಾಗಿದೆ. ಪಾಕಿಸ್ತಾನದ ಯುವ ಪಡೆ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ನಸೀಮ್‌ ಶಾ ಅವರನ್ನು ಹಿಂಪಡೆದಿರುವುದು ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಬಾರದಷ್ಟೇ ಎಂದು ಪಿಸಿಬಿ ಸಿಇಒ ವಸೀಂ ಖಾನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com