ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿಯಲ್ಲಿ ಸುಧಾರಣೆ: ಕೋಚ್ ರವಿಶಾಸ್ತ್ರಿ

2019ಕ್ಕೆ ಗುಡ್ ಬೈ ಹೇಳಿರುವ ಟೀಮ್ ಇಂಡಿಯಾ, 2020ರಲ್ಲಿ ನಡೆಯುವ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸವಾಲು ಹಾಗೂ ಆದ್ಯತೆಗಳ ಬಗ್ಗೆ ಮುಖ್ಯ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.
ರವಿ ಶಾಸ್ತ್ರಿ
ರವಿ ಶಾಸ್ತ್ರಿ

ನವದೆಹಲಿ: 2019ಕ್ಕೆ ಗುಡ್ ಬೈ ಹೇಳಿರುವ ಟೀಮ್ ಇಂಡಿಯಾ, 2020ರಲ್ಲಿ ನಡೆಯುವ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸವಾಲು ಹಾಗೂ ಆದ್ಯತೆಗಳ ಬಗ್ಗೆ ಮುಖ್ಯ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ. ಸದ್ಯ ಟೆಸ್ಟ್‌ ಕ್ರಿಕೆಟ್ ನಲ್ಲಿ ತಂಡ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಆದರೆ, ವಿದೇಶಿ ನೆಲದಲ್ಲಿಯೂ ಗೆಲುವಿನ ಲಯ ಉಳಿಸಿಕೊಳ್ಳುವುದು ಕೊಹ್ಲಿ ಪಡೆಯ ನಿಜವಾದ ಸವಾಲಾಗಿದೆ.

ಹೊಸ ದಶಕದ ಆರಂಭದ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ರವಿಶಾಸ್ತ್ರಿ,‘‘ನಾಯಕ ವಿರಾಟ್ ಕೊಹ್ಲಿ ಅವರು ದೀರ್ಘ ಅವಧಿ ಕ್ರಿಕೆಟ್ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದಾರೆ. ಇಂದು ತಂಡದಲ್ಲಿ ವಿಶ್ವದ ಅತ್ಯಂತ ಶ್ರೇಷ್ಠ ಬೌಲಿಂಗ್ ವಿಭಾಗ ಹೊಂದಿರುವುದನ್ನು ಅರಿತುಕೊಂಡ ದಿನವಾಗಿದೆ. ಅಪಾರ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ತಂಡದ ಮಾರ್ಗದರ್ಶನ ನೀಡುವ ವ್ಯಕ್ತಿಯಾಗಿ ಕೊಹ್ಲಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಎದುರಾಗುವ ಪ್ರತಿಕ್ರಿಯೆಗಳ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಬೇಕು,’ ಎಂದು ಹೇಳಿದ್ದಾರೆ.

‘ವಿಶ್ವದಾದ್ಯಂತ ಲಾಭದಾಯಕ ಶ್ರೀಮಂತ ಲೀಗ್‌ಗಳಲ್ಲಿ ಆಡಲು ಅನೇಕರು ಬಯಸುವ ಸಮಯದಲ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ನಿಜವಾದ ಸವಾಲು ಎಂದು ಕೊಹ್ಲಿ ಹೇಳುತ್ತಾರೆ. ದೀರ್ಘ ಸ್ವರೂಪದಲ್ಲಿ ಅತ್ಯುತ್ತಮವಾದುದನ್ನು ಬಯಸುವ ನಾಯಕನನ್ನು ಹೊಂದಿರುವ ತಂಡದ ಮುಖ್ಯ ತರಬೇತುದಾರನಾಗಿ ನನಗೆ ಹೆಮ್ಮೆ ಅನಿಸುತ್ತದೆ. ಇದು ಯುವಕರ ಮೇಲೂ ಪ್ರಭಾವ ಬೀರುತ್ತದೆ’ ಎಂದು ಹೇಳಿದರು. 

‘ಟೆಸ್ಟ್‌ ಕ್ರಿಕೆಟ್ ವಿಷಯಕ್ಕೆ ಬಂದರೆ ಕೇವಲ ಭಾರತ ತಂಡವನ್ನು ಹೊರತುಪಡಿಸಿ ಜಗತ್ತಿನ ಇತರ ತಂಡಗಳ ನಾಯಕರೂ ಕೂಡ ಕೊಹ್ಲಿ ರೀತಿ ಮುಕ್ತ ಮನಸ್ಸಿನಿಂದ ಅನುಮೋದಿಸಬೇಕು. ಆಗ ಎಲ್ಲರಿಗೂ ದೀರ್ಘ ಅವಧಿ ಕ್ರಿಕೆಟ್ ಮೇಲೆ ಹೆಚ್ಚಿನ ಒಲವು ಹಾಗೂ ಅದರ ಸ್ವರೂಪವನ್ನು ಆಹ್ಲಾದಿಸುತ್ತಾರೆ’ ಎಂದರು.

‘ಟೆಸ್ಟ್‌ ಕ್ರಿಕೆಟ್ ಅನ್ನು ಸೂಪರ್ ಸ್ಟಾರ್ ಆಟಗಾರರು ಸ್ವೀಕರಿಸಿದಾಗ ಅವರ ಆಟವನ್ನು ಚಿಕ್ಕ ಮಕ್ಕಳಂತೆ ವೀಕ್ಷಿಸಲು ಇಚ್ಚೆಪಡುವ ಮನೋಭಾವ ಬೆಳೆಯುತ್ತದೆ. ಆಗ, ಆಡುವವರು ಭಾರತೀಯರು, ಶ್ರೀಲಂಕಾದವರು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಆಟಗಾರರೇ ಆಗಿದ್ದರೂ ಅವರನ್ನು ಅನುಸರಿಸಲು ಬಯಸುತ್ತಾರೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರನ್ನೊಳಗೊಂಡ ಜಸ್ಪ್ರಿತ್ ಬುಮ್ರಾ ನೇತೃತ್ವದ ಬೌಲಿಂಗ್ ತಂಡದ ಸಹಾಯದಿಂದ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ದೀರ್ಘಾವಧಿಯ ಸ್ವರೂಪದಲ್ಲಿ ತಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದಾರೆ. ವೇಗದ ಬೌಲಿಂಗ್‌ಗೆ ಸಹಾಯ ಮಾಡುವ ನ್ಯೂಜಿಲೆಂಡ್ ಪ್ರವಾಸದಲ್ಲಿ ಇದೇ ವೇಗದ ಅಸ್ತ್ರಗಳ ಅಗತ್ಯವಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೇಪ್ ಟೌನ್ ಟೆಸ್ಟ್‌ ಪಂದ್ಯದ ಮೊದಲ ದಿನದ ನಂತರ ತಂಡದ ಸಭೆಯಲ್ಲಿ ನನಗೆ ಬೌಲಿಂಗ್ ವಿಭಾಗದ ಬಗ್ಗೆ ಸ್ಪಷ್ಟತೆ ಸಿಕ್ಕಿತ್ತು. ಇದರಲ್ಲಿ ಅನುಮಾನವೇ ಇಲ್ಲ. ಎರಡನೇ ಇನಿಂಗ್ಸ್‌ ನಲ್ಲಿ ಅವರು ತೋರಿದ್ದ ಪ್ರದರ್ಶನವನ್ನು ಗಮನಿಸಿದಾಗ, ಅತಿ ಶೀಘ್ರದಲ್ಲೇ ಇನ್ನಷ್ಟು ಆಕ್ರಮಣಕಾರಿ ಬೌಲಿಂಗ್ ತಂಡವಾಗುವ ಬಗ್ಗೆ ಅರಿತುಕೊಂಡಿದ್ದೆ. ಒಂದು ಘಟಕದಂತೆ ಪಂದ್ಯದಲ್ಲಿ ಬೌಲಿಂಗ್ ಮಾಡುವುದನ್ನು ಅವರು ಕಲಿತಿದಿದ್ದಾರೆ,’’ ಎಂದು ತಿಳಿಸಿದರು.

ಸನ್ನಿವೇಶವನ್ನು ಅರಿತುಕೊಂಡು ಸ್ವಾಭಾವಿಕ ಆಟದ ಯೋಜನೆಯೊಂದಿಗೆ ಸಾಗಬೇಕು. ಇದೆಲ್ಲ ಒಂದು ತಂಡದ ಪ್ರದರ್ಶನವಾಗಿರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದನ್ನು ಗಮನಿಸಿದ್ದ ನಾನು, ವಿಶ್ವಕ್ಕೆ ಎಚ್ಚರಿಸುವ ದಿನಗಳು ಸಮೀಪಿಸುತ್ತಿದೆ ಎಂದು ಅರಿತುಕೊಂಡಿದ್ದೆ ಎಂದು ರವಿಶಾಸ್ತ್ರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೆಲುಕು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com