ವೃತ್ತಿ ಜೀವನದಲ್ಲೇ ನಿಧಾನಗತಿಯ ಮೊದಲ ರನ್: ಸ್ಪಿತ್ ತೆಗೆದುಕೊಂಡಿದ್ದು 36 ಎಸೆತಗಳು, 42 ನಿಮಿಷ!

ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲನೇ ದಿನ ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ವಿಶಿಷ್ಠ ದಾಖಲೆ ಬರೆದರು.
ವೃತ್ತಿ ಜೀವನದಲ್ಲೇ ನಿಧಾನಗತಿಯ ಮೊದಲ ರನ್: ಸ್ಪಿತ್ ತೆಗೆದುಕೊಂಡಿದ್ದು 36 ಎಸೆತಗಳು, 42 ನಿಮಿಷ!
ವೃತ್ತಿ ಜೀವನದಲ್ಲೇ ನಿಧಾನಗತಿಯ ಮೊದಲ ರನ್: ಸ್ಪಿತ್ ತೆಗೆದುಕೊಂಡಿದ್ದು 36 ಎಸೆತಗಳು, 42 ನಿಮಿಷ!

ಸಿಡ್ನಿ: ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲನೇ ದಿನ ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ವಿಶಿಷ್ಠ ದಾಖಲೆ ಬರೆದರು.

ಪ್ರಸ್ತುತ ಸರಣಿಯಲ್ಲಿ ಸತತ ನಾಲ್ಕು ಬಾರಿ ಕಿವೀಸ್ ವೇಗಿ ನೀಲ್ ವ್ಯಾಗ್ನರ್ ಗೆ ವಿಕೆಟ್ ಒಪ್ಪಿಸಿರುವ ಸ್ಟೀವನ್ ಸ್ಮಿತ್, ಐದನೇ ಬಾರಿ ವಿಕೆಟ್ ನೀಡದೇ ಇರಲು ಭಾರಿ ಕಸರತ್ತು ಮಾಡಿದರು. ಪಂದ್ಯದ ಮೊದಲನೇ ರನ್ ಗಳಿಸಲು ಅವರು ಬರೋಬ್ಬರಿ 42 ನಿಮಿಷಗಳಲ್ಲಿ 36 ಎಸೆತಗಳನ್ನು ತೆಗೆದುಕೊಂಡಿದ್ದಾರೆ. 30ರ ಪ್ರಾಯದ ಸ್ಮಿತ್ ತಡವಾಗಿ ಮೊದಲನೇ ರನ್ ಗಳಿಸುತ್ತಿದ್ದಂತೆ ಅಂಗಳದಲ್ಲಿ ಹಾಸ್ಯಸ್ಪದ ಸನ್ನಿವೇಶ ಉಂಟಾಯಿತು. ಇದಕ್ಕೆ ಸ್ಮಿತ್ ಕೂಡ ತನ್ನ ತೋಳನ್ನು ಮೇಲೆತ್ತಿ ಸಹಕರಿಸಿದರು.

ತನ್ನ ವೃತ್ತಿ ಜೀವನದಲ್ಲೇ ಸ್ಮಿತ್ ಅತ್ಯಂತ ತಡವಾಗಿ ಒಂದು ರನ್ ಗಳಿಸಿದ್ದು ಇದೇ ಮೊದಲು. ಇದಕ್ಕೂ ಮುನ್ನ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ 2014ರಲ್ಲಿ ಭಾರತದ ವಿರುದ್ಧ ಮೊದಲ ರನ್ ಗಳಿಸಲು 18 ಎಸೆತಗಳನ್ನು ತೆಗೆದುಕೊಂಡಿದ್ದರು. ಆಸ್ಟ್ರೇಲಿಯಾ ಈಗಾಗಲೇ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಎರಡೂ ಪಂದ್ಯಗಳನ್ನು ಟಿಮ್ ಪೈನ್ ಪಡೆ ಜಯ ಸಾಧಿಸಿದೆ.
 
 ಮಾರ್ನಸ್ ಲಾಬುಶೇನ್ (ಅಜೇಯ 130 ರನ್ ) ಹಾಗೂ ಸ್ಟೀವನ್ ಸ್ಮಿತ್ (63 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಮೊದಲನೇ ದಿನದ ಮುಕ್ತಾಯಕ್ಕೆ 90 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com