ಐಸಿಸಿ ವಾರ್ಷಿಕ ಪುರಸ್ಕಾರ:ರೋಹಿತ್ ಶರ್ಮಾ ಏಕದಿನ ಕ್ರಿಕೆಟಿಗ, ವಿರಾಟ್ ಕೊಹ್ಲಿಗೆ ‘ಸ್ಪಿರಿಟ್ ಆಫ್ ಕ್ರಿಕೆಟ್’ ಪ್ರಶಸ್ತಿ

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಳೆದ ವರ್ಷದುದ್ದಕ್ಕೂ ಅಭೂತಪೂರ್ವ ರನ್ ಗಳಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘2019 ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಅಲ್ಲದೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಸ್ಪಿರಿಟ್ ಆಫ್ ಕ್ರಿಕೆಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಳೆದ ವರ್ಷದುದ್ದಕ್ಕೂ ಅಭೂತಪೂರ್ವ ರನ್ ಗಳಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘2019 ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಅಲ್ಲದೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಸ್ಪಿರಿಟ್ ಆಫ್ ಕ್ರಿಕೆಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.

32 ವರ್ಷದ ರೋಹಿತ್ ಕಳೆದ ವರ್ಷ ಒಟ್ಟಾರೆ ಏಳು ಏಕದಿನ ಶತಕ ಸೇರಿದಂತೆ 10 ಶತಕಗಳನ್ನು ಗಳಿಸಿಕೊಂಡಿದ್ದಾರೆ.ಇನ್ನು ಏಳು ಏಕದಿನಗಳಲ್ಲಿ ಐದು ಪಂದ್ಯಗಳು 2019 ರ ವಿಶ್ವಕಪ್‌ನ ಭಾಗವಾಗಿದ್ದವು.  ಪಂದ್ಯಾವಳಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಹಾಗೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಭಾಜನರಾಗಿದ್ದರು.

ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಶ್ವಕಪ್ ಹಣಾಹಣಿಯ ಸಂದರ್ಭದಲ್ಲಿ, ಬಾಲ್ ಟ್ಯಾಂಪರಿಂಗ್ ಹಗರಣದ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಸ್ಮಿತ್‌ಗೆ ಬೇಸರವಾಗುವ ಟೀಕೆಗಳನ್ನು ನಿಲ್ಲಿಸುವಂತೆ ಅಭಿಮಾನಿಗಳನ್ನು ಕೋಹ್ಲಿ ಮನವೊಲಿಸಿದ ರೀತಿ ಅದ್ಭುತವಾಗಿತ್ತು.ಅದಕ್ಕಾಗಿ ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇನ್ನು ಟೀಂ ಇಂಡಿಯಾ ಆಟಗಾರ  ದೀಪಕ್ ಚಹಲ್ ವರ್ಷದ ಟಿ 20 ಅಂತರರಾಷ್ಟ್ರೀಯ ಸಾಧಕರೆಂದು ಗುರುತಿಸಲ್ಪಟ್ಟಿದ್ದಾರೆ.ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ ವರ್ಷದ ಉದಯೋನ್ಮುಖ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾದರು.

ವಿಶ್ವದ ಅಗ್ರ ಶ್ರೇಯಾಂಕದ ಟೆಸ್ಟ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಐಸಿಸಿಯವರ್ಷದ ಟೆಸ್ಟ್ ಕ್ರಿಕೆಟಿಗ ಎಂದು ಶ್ಲಾಘಿಸಲಾಗಿದೆ.ಅವರು ಕಳೆದ ವರ್ಷ  12 ಟೆಸ್ಟ್ ಪಂದ್ಯಗಳಲ್ಲಿ 59 ವಿಕೆಟ್ ಗಳಿಸಿದರು ಹಾಗೂ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಶ್ರೇಯಾಂಕಿತ ಬೌಲರ್ ಆಗಿ ವರ್ಷವನ್ನು ಮುಗಿಸಿದರು.

ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಐಸಿಸಿ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

ವರ್ಷದ ಕ್ರಿಕೆಟಿಗ: ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
ವರ್ಷದ ಟೆಸ್ಟ್ ಕ್ರಿಕೆಟಿಗ: ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)
ಏಕದಿನ ಆಟಗಾರ: ರೋಹಿತ್ ಶರ್ಮಾ (ಭಾರತ)
ಉದಯೋನ್ಮುಖ ಆಟಗಾರ: ಮಾರ್ನಸ್ ಲ್ಯಾಬುಸ್ಚಾಗ್ನೆ (ಆಸ್ಟ್ರೇಲಿಯಾ
ವರ್ಷದ ಅಸೋಸಿಯೇಟ್ ಆಟಗಾರ ಕೈಲ್ ಕೋಟ್ಜರ್ (ಸ್ಕಾಟ್ಲೆಂಡ್)
ವರ್ಷದ ಅಂಪೈರ್: ರಿಚರ್ಡ್ ಇಲಿಂಗ್ವರ್ತ್
ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ:ವಿರಾಟ್ ಕೊಹ್ಲಿ
ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ : ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)
ವರ್ಷದ ಹಿಳಾ ಏಕದಿನ ಆಟಗಾರ್ತಿ: ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)
ಮಹಿಳೆಯರ ಟಿ 20 ಐ ವರ್ಷದ ಆಟಗಾರ್ತಿ: ಅಲಿಸಾ ಹೀಲಿ (ಆಸ್ಟ್ರೇಲಿಯಾ)
ವರ್ಷದ ಮಹಿಳಾ ಉದಯೋನ್ಮುಖ ಆಟಗಾರ್ತಿ: ಚಾನಿದಾ ಸುತ್ತಿರುವಾಂಗ್ (ಥೈಲ್ಯಾಂಡ್)

ವರ್ಷದ ಟೆಸ್ಟ್ ತಂಡ: ಮಾಯಾಂಕ್ ಅಗರ್ವಾಲ್, ಟಾಮ್ ಲಾಥಮ್, ಮಾರ್ನಸ್ ಲ್ಯಾಬುಸ್ಚಾಗ್ನೆ, ವಿರಾಟ್ ಕೊಹ್ಲಿ (ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೀಲ್ ವ್ಯಾಗ್ನರ್, ನಾಥನ್ ಲಿಯಾನ್

ವರ್ಷದ ಏಕದಿನ ತಂಡ: ರೋಹಿತ್ ಶರ್ಮಾ, ಶೈ ಹೋಪ್, ವಿರಾಟ್ ಕೊಹ್ಲಿ (ನಾಯಕ), ಬಾಬರ್ ಅಜಮ್, ಕೇನ್ ವಿಲಿಯಮ್ಸನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್

ವರ್ಷದ ಮಹಿಳಾ ಏಕದಿನ ತಂಡ: ಅಲಿಸಾ ಹೀಲಿ (ಆಸ್ಟ್ರೇಲಿಯಾ, ವಾರ), ಸ್ಮೃತಿ ಮಂಧಾನಾ (ಭಾರತ), ಟಾಮ್ಸಿನ್ ಬ್ಯೂಮಾಂಟ್ (ಇಂಗ್ಲೆಂಡ್), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ, ನಾಯಕ), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಜೆಸ್ ಜೊನಾಸ್ಸೆನ್ (ಆಸ್ಟ್ರೇಲಿಯಾ), ಶಿಖಾ ಪಾಂಡೆ (ಭಾರತ), ಜುಲಾನ್ ಗೋಸ್ವಾಮಿ (ಭಾರತ), ಮೇಗನ್ ಶುಟ್ (ಆಸ್ಟ್ರೇಲಿಯಾ), ಪೂನಮ್ ಯಾದವ್ (ಭಾರತ)

ವರ್ಷದ ಮಹಿಳಾ ಟಿ 20 ಐ ತಂಡ: ಅಲಿಸಾ ಹೀಲಿ (ಆಸ್ಟ್ರೇಲಿಯಾ, ವಾರ), ಡೇನಿಯಲ್ ವ್ಯಾಟ್ (ಇಂಗ್ಲೆಂಡ್), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ, ನಾಯಕ), ಸ್ಮೃತಿ ಮಂಧನಾ (ಭಾರತ), ಲಿಜೆಲ್ ಲೀ (ದಕ್ಷಿಣ ಆಫ್ರಿಕಾ), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ನಿಡಾ ದಾರ್ (ಪಾಕಿಸ್ತಾನ), ಮೇಗನ್ ಶುಟ್ (ಆಸ್ಟ್ರೇಲಿಯಾ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ), ರಾಧಾ ಯಾದವ್ (ಭಾರತ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com