ನ್ಯೂಜಿಲ್ಯಾಂಡ್ ಪ್ರವಾಸ: ಧವನ್ ಬಳಿಕ ಟೀಂ ಇಂಡಿಯಾಗೆ ಡಬಲ್ ಶಾಕ್

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ನ್ಯೂಜಿಲ್ಯಾಂಡ್ ಸರಣಿಯಿಂದ ಹೊರಬಿದ್ದಿದ್ದು ಇದೀಗ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ.

Published: 21st January 2020 06:53 PM  |   Last Updated: 21st January 2020 06:53 PM   |  A+A-


Team-India

ಟೀಂ ಇಂಡಿಯಾ

Posted By : Vishwanath S
Source : Online Desk

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ನ್ಯೂಜಿಲ್ಯಾಂಡ್ ಸರಣಿಯಿಂದ ಹೊರಬಿದ್ದಿದ್ದು ಇದೀಗ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ.

ನ್ಯೂಜಿಲ್ಯಾಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಗೆ ಇಶಾಂತ್ ಶರ್ಮಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡುತ್ತಿರುವ ಇಶಾಂತ್ ಶರ್ಮಾ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು 6 ವಾರಗಳ ವಿಶ್ರಾಂತಿ ಅಗತ್ಯವಿದ್ದು ಫೆಬ್ರವರಿ 21ರಂದು ವೆಲ್ಲಿಂಗ್ಟನ್ ನಲ್ಲಿ ಆರಂಭವಾಗುವ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಇಶಾಂತ್ ಹೊರಬಿದ್ದಿದ್ದಾರೆ.

ಎಂಆರ್ ಐ ಸ್ಕ್ಯಾನ್ ವರದಿಯಲ್ಲಿ ಇಶಾಂತ್ ಅವರ ಪಾದದಲ್ಲಿನ ಮಾಂಸಖಂಡದಲ್ಲಿ ಹರಿತ ಕಂಡುಬಂದಿದೆ. ಹೀಗಾಗಿ ವೈದ್ಯರು ಇಶಾಂತ್ ಗೆ ಆರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp