ಸಚಿನ್ ಸ್ಟ್ರೈಕ್ ಯಾಕೆ ತೆಗೆದುಕೊಳ್ಳುತ್ತಿರಲಿಲ್ಲ, ಇದಕ್ಕೆ ಗಂಗೂಲಿ ಹೇಳಿದ್ದೇನು ಗೊತ್ತ?

ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಆರಂಭಿಕರಾಗಿ ಕಣಕ್ಕಿಳಿದರೂ ಸ್ಟ್ರೈಕ್ ನಲ್ಲಿ ಯಾಕೆ ಬ್ಯಾಟಿಂಗ್ ಆರಂಭಿಸುತ್ತಿರಲಿಲ್ಲ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.
ಸಚಿನ್-ಗಂಗೂಲಿ
ಸಚಿನ್-ಗಂಗೂಲಿ

ನವದೆಹಲಿ: ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಆರಂಭಿಕರಾಗಿ ಕಣಕ್ಕಿಳಿದರೂ ಸ್ಟ್ರೈಕ್ ನಲ್ಲಿ ಯಾಕೆ ಬ್ಯಾಟಿಂಗ್ ಆರಂಭಿಸುತ್ತಿರಲಿಲ್ಲ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. 

ಟೀಂ ಇಂಡಿಯಾ ಪರ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಈ ವೇಳೆ ಪ್ರತಿ ಬಾರಿಯೂ ಗಂಗೂಲಿ ಅವರೇ ಸ್ಟ್ರೈಕ್ ನಲ್ಲಿ ಮೊದಲ ಎಸೆತವನ್ನು ಎದುರಿಸುತ್ತಿದ್ದರು.

ಸಚಿನ್ ನಾನ್ ಸ್ಟ್ರೈಕ್ ನಲ್ಲಿ ನಿಲ್ಲಲು ಎರಡು ಕಾರಣ ಹೇಳಿದ್ದರು. ಒಂದು ಉತ್ತಮ ಫಾರ್ಮ್ ಮತ್ತೊಂದು ಕಳಪೆ ಫಾರ್ಮ್. ಅವರು ಉತ್ತಮ ಫಾರ್ಮ್ ಅಥವಾ ಕಳಪೆ ಫಾರ್ಮ್ ನಲ್ಲಿರಲಿ ಅವರು ನಾನ್ ಸ್ಟ್ರೈಕ್ ನಲ್ಲೇ ಬ್ಯಾಟಿಂಗ್ ಆರಂಭಿಸುತ್ತಿದ್ದರು. 

ಹೀಗಾಗಿ ನಾನು ಒತ್ತಡದಲ್ಲೇ ಬ್ಯಾಟಿಂಗ್ ಆರಂಭಿಸುತ್ತಿದ್ದೆ. ಆದರೆ ಕೆಲವೊಮ್ಮೆ ನಾನು ಸಚಿನ್ ಗಿಂತ ವೇಗವಾಗಿ ಹೋಗಿ ನಾನ್ ಸ್ಟ್ರೈಕ್ ನಲ್ಲಿ ನಿಂತು ಬಿಡುತ್ತಿದ್ದೆ ಆಗ ಸಚಿನ್ ಒತ್ತಾಯಪೂರ್ವಕವಾಗಿ ಸ್ಟ್ರೈಕ್ ತೆಗೆದುಕೊಳ್ಳುವಂತಾಗುತ್ತಿತ್ತು. ಒಂದೆರೆಡು ಸಲ ಅದು ಆಗಿದೆ ಎಂದರು. 

ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಗಂಗೂಲಿ ಜೋಡಿ ಬರೋಬ್ಬರಿ 4173 ರನ್ ಗಳಿಸಿತ್ತು. ಈ ವೇಳೆ 12 ಶತಕ ಹಾಗೂ 16 ಅರ್ಧ ಶತಕ ಇವರ ಬ್ಯಾಟ್ ನಿಂದ ಮೂಡಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com