ಕೊರೋನಾ ಲಾಕ್ಡೌನ್ ಬಳಿಕ ಕ್ರಿಕೆಟ್; ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮಣಿಸಿದ ವಿಂಡೀಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ

ಮಾರಕ ಕೊರೋನಾ ವೈರಸ್ ಲಾಕ್ಡೌನ್ ಬಳಿಕ ವಿಂಡೀಸ್ ತಂಡದ ಇಂಗ್ಲೆಂಡ್ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಂಡಿದ್ದು, ಮೊದಲ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ವಿರುದ್ಧ ವಿಂಡೀಸ್ ಗೆ ಜಯ
ಇಂಗ್ಲೆಂಡ್ ವಿರುದ್ಧ ವಿಂಡೀಸ್ ಗೆ ಜಯ

ಸೌಥ್ಯಾಂಪ್ಟನ್: ಮಾರಕ ಕೊರೋನಾ ವೈರಸ್ ಲಾಕ್ಡೌನ್ ಬಳಿಕ ವಿಂಡೀಸ್ ತಂಡದ ಇಂಗ್ಲೆಂಡ್ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಂಡಿದ್ದು, ಮೊದಲ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸೌಥ್ಯಾಂಪ್ಟನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಕೊರೋನಾ ಲಾಕ್ಡೌನ್ ಬಳಿಕ  ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭವಾಗಿದ್ದು, ಅದರ ಅಂಗವಾಗಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದೆ. ಅದರಂತೆ ಇಂದು ಸೌಥ್ಯಾಂಪ್ಟನ್ ನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಚ್ ಇಂಡೀಸ್ ತಂಡ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಅದರದ್ದೇ ನೆಲದಲ್ಲಿ  ಮಣಿಸಿದೆ.

ಪಂದ್ಯದ ಮೇಲೆ ಆರಂಭದಿಂದಲೂ ಬಿಗಿ ಹಿಡಿತ ಹೊಂದಿದ್ದ ವೆಸ್ಟ್ ಇಂಡೀಸ್ ಅದನ್ನು ಫಲಿತಾಂಶವಾಗಿ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಗೆಲ್ಲಲು 200 ರನ್‌ಗಳ ಗುರಿಯನ್ನು ಇಂಗ್ಲೆಂಡ್ ನೀಡಿತ್ತು. ಈ ಗುರಿಯನ್ನು ವೆಸ್ಟ್ ಇಂಡೀಸ್ ತಂಡ 6 ವಿಕೆಟ್  ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟರು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಇಂದು ಆರಂಭದಲ್ಲಿ ಆಘಾತಕ್ಕೆ ಒಳಗಾಗಿತ್ತು. ಒಂದು ಹಂತದಲ್ಲಿ ವಿಂಡೀಸ್ ಪಂದ್ಯವನ್ನು ಕಳೆದುಕೊಳ್ಳುವ ಆತಂಕಕ್ಕೂ ಒಳಗಾಗಿತ್ತು. ಆದರೆ ಜರ್ಮೇನ್ ಬ್ಲಾಕ್‌ವುಡ್‌  (95 ರನ್) ಅವರ ಸಮಯೋಚಿತ ಆಟದಿಂದಾಗಿ ವೆಸ್ಟ್ ಇಂಡೀಸ್ ಪಂದ್ಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಸಂಕ್ಷಿಪ್ತ ಸ್ಕೋರ್
ಟಾಸ್: ಇಂಗ್ಲೆಂಡ್, ಬ್ಯಾಟಿಂಗ್ ಆಯ್ಕೆ
ಮೊದಲ ಇನ್ನಿಂಗ್ಸ್
ಇಂಗ್ಲೆಂಡ್:  204 ರನ್ ಗಳಿಗೆ ಆಲೌಟ್
ವೆಸ್ಟ್ ಇಂಡೀಸ್  318 ರನ್ ಗಳಿಗೆ ಆಲೌಟ್

ಎರಡನೇ ಇನ್ನಿಂಗ್ಸ್
ಇಂಗ್ಲೆಂಡ್: 313 ರನ್ ಗಳಿಗೆ ಆಲೌಟ್ 
ವಿಂಡೀಸ್ ಗೆ ಗೆಲ್ಲಲು 200 ರನ್ ಗಳ ಗುರಿ
ವೆಸ್ಟ್ ಇಂಡೀಸ್: 6 ವಿಕೆಟ್ ನಷ್ಟಕ್ಕೆ 200

ಫಲಿತಾಂಶ: ವೆಸ್ಟ್ ಇಂಡೀಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ
ಪಂದ್ಯ ಶ್ರೇಷ್ಠ ಪ್ರಶಸ್ತಿ: ಶ್ಯಾನನ್ ಗೇಬ್ರಿಯಲ್ (137 ರನ್ ನೀಡಿ 9 ವಿಕೆಟ್ ಪಡೆದಿದ್ದಾರೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com