ಏಕಕಾಲದಲ್ಲಿ ಭಾರತ ಆಸೀಸ್ ಪ್ರವಾಸ, ಬಿಗ್ ಬಾಷ್ ಲೀಗ್ ಆರಂಭ!

ಬಹು ನಿರೀಕ್ಷಿತ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆಯೇ ಕಾಕತಾಳೀಯವೆಂಬಂತೆ ಬಿಗ್ ಬಾಷ್ ಲೀಗ್(ಬಿಬಿಎಲ್) ಹತ್ತನೇ ಆವೃತ್ತಿ ನಿಗದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೆಲ್ಬೋರ್ನ್: ಬಹು ನಿರೀಕ್ಷಿತ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆಯೇ ಕಾಕತಾಳೀಯವೆಂಬಂತೆ ಬಿಗ್ ಬಾಷ್ ಲೀಗ್(ಬಿಬಿಎಲ್) ಹತ್ತನೇ ಆವೃತ್ತಿ ನಿಗದಿಯಾಗಿದೆ.

ದೇಶದ ಪ್ರೀಮಿಯರ್ ಟಿ20 ಲೀಗ್ ನ 61 ಪಂದ್ಯಗಳ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಪ್ರಕಟಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವೇಳಾಪಟ್ಟಿ ಅನ್ವಯ, ಡಿ. 3ರಂದು ಅಡಿಲೇಡ್ ಓವಲ್ ನಲ್ಲಿ ಸ್ಟೈಕರ್ಸ್ ಮತ್ತು ರೆನೆಗೇಡ್ಸ್ ತಂಡಗಳು ಎದುರಾಗುವುದರೊಂದಿಗೆ ಬಿಬಿಎಲ್ ಟೂರ್ನಿ ಶುರುವಾಗಲಿದೆ. ಆದರೆ ಡಿಸೆಂಬರ್ 3ರಿಂದಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಸಹ ಬ್ರಿಸ್ಬೇನ್ ನಲ್ಲಿ ಆರಂಭವಾಗಲಿದೆ.

 ಬಿಬಿಎಲ್ ಫೈನಲ್ ಪಂದ್ಯ ಮುಂದಿನ ವರ್ಷದ ಫೆಬ್ರವರಿ 6 ರಂದು ನಿಗದಿಯಾಗಿದೆ.ಈ ಮಧ್ಯೆ, ಅಕ್ಟೋಬರ್ 17ರಿಂದ ನವೆಂಬರ್ 29ರವರೆಗೆ 59 ಪಂದ್ಯಗಳ ಮಹಿಳಾ ಬಿಬಿಎಲ್ ಸಹ ನಡೆಯಲಿದೆ.

ಕೋವಿಡ್-19 ಪಿಡುಗು ಬೇಸಿಗೆ ಕ್ರಿಕೆಟ್ ನಲ್ಲಿ ಕೆಲವು ಬದಲಾವಣೆಗೆ ಒತ್ತಾಯಿಸಬಹುದಾದರೂ ಇಂದಿನ ಪ್ರಕಟಣೆಯು ಐದು ತಂಡಗಳ ಫೈನಲ್ಸ್ ಮಾದರಿಯನ್ನು ಮತ್ತೆ ಜಾರಿಗೊಳಿಸುವುದು ಸೇರಿದಂತೆ ಪೂರ್ಣ 61 ಪಂದ್ಯಗಳ ವೇಳಾಪಟ್ಟಿಯ ಬದ್ಧತೆಯನ್ನು ಖಚಿತಪಡಿಸುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಿಬಿಎಲ್ ವೇಳಾಪಟ್ಟಿ ಪ್ರಕಾರ, ಅಡಿಲೇಡ್ ಓವಲ್ ನಲ್ಲಿ ಡಿಸೆಂಬರ್ 11ರಿಂದ 15ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹರ್ನಿಶಿ ಟೆಸ್ಟ್ ನಡೆಯಲಿರುವ ಕಾರಣ ಐದು ದಿನಗಳ ವಿರಾಮಕ್ಕೂ ಮುನ್ನ ಬಿಬಿಎಲ್ 8 ರಾತ್ರಿ ನಡೆಯಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಡಿ. 26ರಿಂದ 30 ನಡೆದರೆ, ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಜ.3ರಿಂದ 7ರವರೆ ಆಯೋಜನೆಯಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್ ಮುಖ್ಯಸ್ಥ ಅಲಿಸ್ಟೈರ್ ಡಾಬ್ಸನ್, ಕೋವಿಡ್-19 ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಈವರೆಗೆ 9 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com