ಟೀಂ ಇಂಡಿಯಾಗೆ ಬೆನ್‌ ಸ್ಟೋಕ್ಸ್‌ ರೀತಿಯ ಆಲ್‌ ರೌಂಡರ್‌ ಬೇಕು: ಇರ್ಫಾನ್ ಪಠಾಣ್

ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯಬೇಕಾದರೆ ತಂಡದಲ್ಲಿ ಇಂಗ್ಲೆಂಡ್‌ನ ತಾರೆ ಬೆನ್‌ ಸ್ಟೋಕ್ಸ್‌ ಅವರಂತಹ ಅಪ್ರತಿಮ ಆಲ್‌ರೌಂಡರ್‌ ಒಬ್ಬನ ಅಗತ್ಯವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.
ಬೆನ್ ಸ್ಟೋಕ್ಸ್
ಬೆನ್ ಸ್ಟೋಕ್ಸ್

ನವದೆಹಲಿ: ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯಬೇಕಾದರೆ ತಂಡದಲ್ಲಿ ಇಂಗ್ಲೆಂಡ್‌ನ ತಾರೆ ಬೆನ್‌ ಸ್ಟೋಕ್ಸ್‌ ಅವರಂತಹ ಅಪ್ರತಿಮ ಆಲ್‌ರೌಂಡರ್‌ ಒಬ್ಬನ ಅಗತ್ಯವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ವಿಸ್ಡನ್‌ ಟ್ರೋಫಿ ಸಲುವಾಗಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಸ್ಟೋಕ್ಸ್‌ ತಮ್ಮ ಆಲ್‌ರೌಂಡ್‌ ಆಟದ ಮೂಲಕ ಏಕಾಂಗಿಯಾಗಿ ಇಂಗ್ಲೆಂಡ್‌ಗೆ 113 ರನ್‌ಗಳ ಜಯ ತಂದುಕೊಟ್ಟಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅಜೇಯ ಅರ್ಧಶತಕದ ಜೊತೆಗೆ ಒಟ್ಟು ಮೂರು ವಿಕೆಟ್‌ಗಳನ್ನೂ ಪಡೆದಿದ್ದ ಸ್ಟೋಕ್ಸ್‌ ಪಂದ್ಯ ಶ್ರೇಷ್ಠ ಗೌರವ ಕೂಡ ಪಡೆದಿದ್ದರು.

ಪ್ರಥಮ ಇನಿಂಗ್ಸ್‌ನಲ್ಲಿ ಒತ್ತಡದಲ್ಲಿದ್ದ ಇಂಗ್ಲೆಂಡ್‌ಗೆ ಆಸರೆಯಾಗಿ ನಿಂತ ಸ್ಟೋಕ್ಸ್‌ 176 ರನ್‌ ಬಾರಿಸಿ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ 469/9 ಡಿ. ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟರು. ಬಳಿಕ 2ನೇ ಇನಿಂಗ್ಸ್‌ನಲ್ಲಿ 57 ಎಸೆತಗಳಲ್ಲಿ ಅಜೇಯ 78 ರನ್‌ ಚಚ್ಚಿ ವಿಂಡೀಸ್‌ಗೆ ಕೊನೆಯ ದಿನದಾಟದಲ್ಲಿ 312 ರನ್‌ಗಳ ಕಠಿಣ ಗುರಿ ನೀಡಿದ್ದರು.

ಇನ್ನು ಮೊದಲ ಟೆಸ್ಟ್‌ನಲ್ಲಿ ಜೋ ರೂಟ್‌ ಗೈರು ಹಾಜರಿ ನಡುವೆ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿದ್ದ ಸ್ಟೋಕ್ಸ್‌ ಜಯ ತಂದುಕೊಡುವಲ್ಲಿ ವಿಫಲರಾಗಿದ್ದರು. ಆದರೆ ಎರಡನೇ ಟೆಸ್ಟ್‌ನಲ್ಲಿ ಒಬ್ಬ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಮಾಲೆ ತೊಡಿಸಿದ್ದಾರೆ.

ಸ್ಟೋಕ್ಸ್‌ ಅವರ ಈ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ಕಂಡು ಬೆರಗಾಗಿ ಟ್ವೀಟ್‌ ಮಾಡಿರುವ ಪಠಾಣ್, "ಬೆನ್‌ ಸ್ಟೋಕ್ಸ್‌ ಅವರಂತಹ ಮ್ಯಾಚ್‌ ವಿನ್ನಿಂಗ್‌ ಆಲ್‌ರೌಂಡರ್‌ ಭಾರತ ತಂಡದಲ್ಲಿ ಇದ್ದರೆ ಟೀಮ್‌ ಇಂಡಿಯಾ ಅಜೇಯ ತಂಡವಾಗಬಲ್ಲದು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com