ತೆಂಡೂಲ್ಕರ್‌ಗೆ ದ್ವಿಶತಕ, ತ್ರಿಶತಕ ಬಾರಿಸುವ ಕಲೆ ಗೊತ್ತಿಲ್ಲ: ಕಪಿಲ್‌ ದೇವ್

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಹುಪಾಲು ಬ್ಯಾಟಿಂಗ್‌ ದಾಖಲೆಗಳು ಭಾರತೀಯ ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್ ಹೆಸರಲ್ಲಿದೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪೈಕಿ ಮಾಸ್ಟರ್‌ ಬ್ಲಾಸ್ಟರ್‌ ಟಾಪ್‌ 5 ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ ಎಂದರೆ ಅಚ್ಚರಿಯಾಗುತ್ತದೆ.
ತೆಂಡೂಲ್ಕರ್‌ಗೆ ದ್ವಿಶತಕ, ತ್ರಿಶತಕ ಬಾರಿಸುವ ಕಲೆ ಗೊತ್ತಿಲ್ಲ: ಕಪಿಲ್‌ ದೇವ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಹುಪಾಲು ಬ್ಯಾಟಿಂಗ್‌ ದಾಖಲೆಗಳು ಭಾರತೀಯ ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್ ಹೆಸರಲ್ಲಿದೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪೈಕಿ ಮಾಸ್ಟರ್‌ ಬ್ಲಾಸ್ಟರ್‌ ಟಾಪ್‌ 5 ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ ಎಂದರೆ ಅಚ್ಚರಿಯಾಗುತ್ತದೆ.

ಮಾರ್ವನ್‌ ಅಟಪಟ್ಟು, ವೀರೇಂದ್ರ ಸೆಹ್ವಾಗ್, ಜಾವೆದ್‌ ಮಿಯಾಂದಾದ್, ಯೂನಿಸ್‌ ಖಾನ್ ಮತ್ತು ರಿಕಿ ಪಾಂಟಿಂಗ್ ಅವರಂತೆ ಸಚಿನ್‌ ಕೂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕಗಳನ್ನು ಮಾತ್ರ ಹೊಂದಿದ್ದಾರೆ. ಈ ಮೂಲಕ ಅತಿ ಹೆಚ್ಚು ದ್ವಿಶತಕಗಳನ್ನು ಬಾರಿಸಿದ ಪಟ್ಟಿಯಲ್ಲಿ ಸಚಿನ್‌ಗೆ 12ನೇ ಸ್ಥಾನ ಲಭ್ಯವಾಗಿದೆ.

ಸಚಿನ್ ತಮ್ಮ ವೃತ್ತಿಜೀವನವನ್ನುದಾಖಲೆಯ  51 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಆದರೆ ದೊಡ್ಡ ಸ್ಕೋರ್ ಗಳಿಸಲು ವಿಫಲವಾದರು. ಟೀಂ ಇಂಡಿಯಾದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ಪ್ರಕಾರ, ಸಚಿನ್ ಶತಕಗಳನ್ನು ದೊಡ್ಡ ಮೈಲಿಗಲ್ಲುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತಿಳಿದಿರಲಿಲ್ಲ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಮೂರು ಟ್ರಿಪಲ್ ಸೆಂಚುರಿಗಳನ್ನು ಗಳಿಸಿರಬೇಕು ಎಂದು ಭಾರತದ ಮಾಜಿ ಕೋಚ್ ಹೇಳಿದ್ದಾರೆ.

"ಸಚಿನ್ ಬಹುಪ್ರತಿಭಾವಂತ  ನಾನು ಅದನ್ನು ಯಾರೊಬ್ಬರಲ್ಲೂ ನೋಡಿರಲಿಲ್ಲ. ಅವರು ಶತಕಗಳನ್ನು ಗಳಿಸುವುದು ಹೇಗೆಂದು ತಿಳಿದಿದ್ದರು ಆದರೆ ಅದೇ ಶತಕವನ್ನು ದ್ವಿಶತಕ, ತ್ರಿಶತಕಗಳನ್ನಾಗಿ ಪರಿವರ್ತಿಸುಉವುದು ಹೇಗೆಂದು ಎಂದಿಗೂ ಅರಿತಿರಲಿಲ್ಲ. ಸಚಿನ್ ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಹೊಂದಿದ್ದರು. ಅವರು  ದಾಖಲೆಗಳನ್ನು ಮಾಡುವುದು ಹೇಗೆಂದು ತಿಳಿದಿದ್ದರು. ಆದರೆ ದ್ವಿಶತಕ, ತ್ರಿಶತಕಗಳನ್ನು ಗಳಿಸುವ ಬಗ್ಗೆ ತಿಳಿಇದಿರಲಿಲ್ಲ" ಕಪಿಲ್ ದೇವ್ ಸಂದರ್ಶನವೊಂದರಲ್ಲಿ ಹೇಳೀದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಡಬ್ಲ್ಯು.ವಿ ರಾಮನ್‌ ಜೊತೆಗಿನ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ಮಾತನಾಡಿದ್ದಾರೆ. 

"ಸಚಿನ್ ಅವರ ಪ್ರತಿಭಾಶಕ್ತಿಗೆ ಕನಿಷ್ಟ 5 ತ್ರಿಶತಕಗಳು ಮತ್ತು 10ಕ್ಕೂ  ಹೆಚ್ಚಿನ ದ್ವಿಶತಕಗಳು ಅವರ ಹೆಸರಲ್ಲಿ ಇರಬೇಕಾಗಿತ್ತು.  ಆದರೆ ಅವರ ಹೆಸರಲ್ಲಿ ಒಂದೂ ತ್ರಿಶತಕವಿಲ್ಲ.  ಆದರೆ ಬೌಲರ್ ಯಾರೇ ಆಗಿರಲಿ (ವೇಗಿ ಅಥವಾ ಸ್ಪಿನ್ನರ್‌ ) ಬೌಡರಿ ಬಾರಿಸುವ ಕಲೆ ಸಚಿನ್ ಅವರಲ್ಲಿತ್ತು.  ಆದರೆ ಅವರೆಂದಿಗೂ ಆಕ್ರಮಣಕಾರಿ ಆಟವಾಡುತ್ತಿರಲಿಲ್ಲ. ಶತಕ ಗಳಿಸಿದ ಬಳಿಕ ಮತ್ತೆ ರಕ್ಷಣತ್ಮಕ ಆಟಕ್ಕೆ ಇಳಿಯುತ್ತಿದ್ದರು. ಹಾಗಾಗಿಯೇ ಅವರಿಗೆ ಮೊದಲ ಟೆಸ್ಟ್ ದ್ವಿಶತಕದಿಂದ ಮತ್ತೆ ಐದು ದ್ವಿಶತಕ ಗಳಿಸಲು ಹತ್ತು ವರ್ಷಗಳು ತಗುಲಿದವು " ಕಲ್ಪಿ ದೇವ್ ಹೇಳಿದ್ದಾರೆ.

ದಾಖಲೆಯ ಅನುಸಾರ ಟೀಂ ಇಂಡಿಯಾ ನಾಯಕವಿರಾಟ್ ಕೊಹ್ಲಿ ಅತಿ ಹೆಚ್ಚು ಟೆಸ್ಟ್‌ ದ್ವಿಶತಕ (7) ದಾಖಲಿಸಿದ್ದರೆ ವೀರೇಂದ್ರ ಸೆಹ್ವಾಗ್ ಎರಡು ತ್ರಿಶತಕ ಕರುಣ್ ನಾಯರ್ ಒಂದು ಬಾರಿ ತ್ರಿಶತಕದ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com