ವಿರಾಟ್‌ ಕೊಹ್ಲಿಗಿಂತ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌: ವಾಸೀಮ್‌ ಜಾಫರ್

ವಿರಾಟ್ ಕೊಹ್ಲಿಗಿಂತ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ‌ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ವಾಸೀಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

Published: 06th June 2020 11:28 PM  |   Last Updated: 06th June 2020 11:28 PM   |  A+A-


Steve Smith Better Than Virat Kohli: Wasim Jaffer

ವಿರಾಟ್‌ ಕೊಹ್ಲಿಗಿಂತ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌: ವಾಸೀಮ್‌ ಜಾಫರ್

Posted By : Srinivas Rao BV
Source : UNI

ನವದೆಹಲಿ: ವಿರಾಟ್ ಕೊಹ್ಲಿಗಿಂತ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ‌ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ವಾಸೀಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ದೀರ್ಘಾವಧಿ ಕ್ರಿಕೆಟ್ನಲ್ಲಿ ಗಳಿಸಿರುವ ಸರಾಸರಿ ಮೊತ್ತ ಅವರ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ. ಈಗಿನ ತಲೆಮಾರಿನಲ್ಲಿ ಸ್ಮಿತ್ ಅವರ ಟೆಸ್ಟ್ ಸರಾಸರಿ ಹಿಂದಿಕ್ಕುವವರು ಯಾರೂ ಇಲ್ಲ ಎಂಬುವುದಂತೂ ನಿಜ. ಬಲಗೈ ಬ್ಯಾಟ್ಸ್ಮನ್ ಅನ್ನು ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಡಾನ್ ಬ್ರಾಡ್ಮನ್ಗೆ ಹೋಲಿಕೆ ಮಾಡಬಹುದಾಗಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್ ಅವರ ಸಮೀಪವಿದ್ದಾರೆ. ಕೊಹ್ಲಿ ಮೂರೂ ಸ್ವರೂಪದಲ್ಲೂ ಅತ್ಯದ್ಭುತ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 53.62ರ ಸರಾಸರಿಯಲ್ಲಿ ರನ್ ಗಳಿಸಿದ್ದು, ದೀರ್ಘಾವಧಿ ಕ್ರಿಕೆಟ್ನಲ್ಲಿ ಸ್ಟೀವನ್ ಸ್ಮಿತ್ ಅವರನ್ನು ಹಿಂದಿಕ್ಕುವುದು ಒಂದು ಬಾಕಿ ಇದೆ. 

ಚೆಂಡು ವಿರೂಪ ಪ್ರಕರಣದಲ್ಲಿ ಅಮಾನತು ಶಿಕ್ಷೆ ಅನುಭವಿಸಿ ರಾಷ್ಟ್ರೀಯ ತಂಡಕ್ಕೆ ಮರಳಿದ ಸ್ಟೀವನ್ ಸ್ಮಿತ್ ಅದ್ಭುತ ಪ್ರದರ್ಶನ ತೋರಿದ್ದರು. ಆ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು. ಈ ಬಗ್ಗೆ ಮಾತನಾಡಿರುವ ದೇಶಿ ಕ್ರಿಕೆಟ್ನ ದಂತಕತೆ ವಾಸೀಮ್ ಜಾಫರ್, ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ಗಿಂತ ಸ್ಟೀವನ್ ಸ್ಮಿತ್ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.

911 ಅಂಕಗಳೊಂದಿಗೆ ಸ್ಮಿತ್ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಕ್ರಿಕೆಟ್ ಮರಳಿದ ಬಳಿಕ ಸ್ಮಿತ್, ತೋರಿದ ಪ್ರದರ್ಶನಕ್ಕೆ ನಾನು ಹೆಚ್ಚಿನ ಅಂಕಗಳನ್ನು ನೀಡುತ್ತೇನೆ ಎಂದು ಜಾಫರ್ ಟೈಮ್ಸ್ ನೌ ಸಂದರ್ಶನದಲ್ಲಿ ತಿಳಿಸಿದ್ದಾರೆ. ಲೆಗ್ ಸ್ಪಿನ್ನರ್ ಆಗಿದ್ದ ಸ್ಟೀವನ್ ಸ್ಮಿತ್ ಉತ್ತಮ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಅಂಸಾಂಪ್ರದಾಯಿಕ ಬ್ಯಾಟಿಂಗ್ ಸ್ಟಾನ್ಸ್ ಹೊಂದಿರುವ ಸ್ಮಿತ್ ಚೆಂಡನ್ನು ಬಹಳ ಹತ್ತಿರದಿಂದ ನೋಡುತ್ತಾರೆ, ಹಾಗಾಗಿ ಅವರನ್ನು ಬೌಲರ್ ಔಟ್ ಮಾಡುವುದು ಕಷ್ಟ.  ಸುಂದರ ಹಾಗೂ ಮುಷ್ಠಿ ಬ್ಯಾಟಿಂಗ್ ಶೈಲಿ ಮೈಗೂಡಿಸಿಕೊಂಡಿರುವ ಅವರು ಸುಲಭವಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ರನ್ಗಳನ್ನು ಪರಿವರ್ತಿಸುತ್ತಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp