ಐಪಿಎಲ್ ವೇಳೆ ಜನಾಂಗೀಯ ನಿಂದನೆ: 'ಕಾಲೂ' ಎಂದರೆ ಕರಿಯ ಎಂದರ್ಥವೆಂದು ಈಗ ತಿಳಿದೆ: ಡರೆನ್‌ ಸಾಮಿ ಆಕ್ರೋಶ

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುವಾಗ ತಮ್ಮನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಡರೆನ್ ಸಾಮಿ ಇದೀಗ ಆಕ್ರೋಶ ಹೊರಹಾಕಿದ್ದಾರೆ.
ಡರೇನ್ ಸ್ವಾಮಿ
ಡರೇನ್ ಸ್ವಾಮಿ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುವಾಗ ತಮ್ಮನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಡರೆನ್ ಸಾಮಿ ಇದೀಗ ಆಕ್ರೋಶ ಹೊರಹಾಕಿದ್ದಾರೆ.

ಸನ್‌ರೈಸರ್ಸ್‌ ತಂಡದ ಯಶಸ್ವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಡರೆನ್‌ ಸಾಮಿ ಅವರನ್ನು 'ಕಾಲೂ' ಅಂದರೆ 'ಕರಿಯ' ಎಂಬ ಹೆಸರಿನಿಂದ ಕರೆಯುತ್ತಿದ್ದರು. ಇದರ ಅರ್ಥ ಕರಿಯ ಎಂಬುದು ತಮಗೆ ಇದೀಗ ತಿಳಿದಿದೆ ಎಂದು ಸಾಮಿ ಅಸಮಾಧಾನ ಹೊರಹಾಕಿದ್ದಾರೆ.

ಐಪಿಎಲ್ ಆಡುತ್ತಿದ್ದಾಗ ಜನಾಂಗೀಯ ನಿಂದನೆ ಎದುರಿಸಿದ್ದೆ: ಸಾಮಿ
ಐಪಿಎಲ್ ಸಮಯದಲ್ಲಿ ಶ್ರೀಲಂಕಾದ ತಿಸಾರ ಪೆರೆರಾ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಸನ್‌ರೈಸರ್ಸ್ ಹೈದರಾಬಾದ್‌ನ ಡರೆನ್ ಸಾಮಿ ಜನಾಂಗೀಯ ನಿಂದನೆ ಎದುರಿಸಿದ್ದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಕಪ್ಪು ಪ್ರಜೆ ಜಾರ್ಜ್ ಫ್ಲಾಯ್ಡ್ ಸಾವಿನ ನಂತರ, ಕ್ರೀಡಾ ಜಗತ್ತಿನಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಲು ದೊಡ್ಡ ಧ್ವನಿ ಎತ್ತಲಾಗಿದೆ. ಸ್ಯಾಮಿ ಕೂಡ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com