ಕ್ರಿಕೆಟ್ ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರೂ ರಾಹುಲ್ ದ್ರಾವಿಡ್  ನಾಯಕತ್ವಕ್ಕೆ ಸೂಕ್ತ ಮನ್ನಣೆ ಸಿಗಲಿಲ್ಲ- ಗಂಭೀರ್ 

ಗೋಡೆ ಎಂದೇ ಖ್ಯಾತಿಯಾಗಿದ್ದ ಮಾಜಿ ಆಟಗಾರ ರಾಹುಲ್ ದ್ರಾವಿಡ್, ದೇಶದಲ್ಲಿ ಕ್ರಿಕೆಟ್ ಗೆ ಸಾಕಷ್ಟು ಕೊಡುಗೆ ನೀಡಿದ್ದು,ಸಚಿನ್ ತೆಂಡೊಲ್ಕರ್ ಅವರಿಗೆ ಹೋಲಿಸಿಬಹುದಾದ ದೊಡ್ಡ ಪ್ರಭಾವ ಬೀರಿದ್ದರೂ ಅದಕ್ಕೆ ತಕ್ಕಂತ ಮನ್ನಣೆ ಸಿಗಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಗೌತಮ್ ಗಂಭೀರ್, ರಾಹುಲ್ ದ್ರಾವಿಡ್
ಗೌತಮ್ ಗಂಭೀರ್, ರಾಹುಲ್ ದ್ರಾವಿಡ್

ನವದೆಹಲಿ: ಗೋಡೆ ಎಂದೇ ಖ್ಯಾತಿಯಾಗಿದ್ದ ಮಾಜಿ ಆಟಗಾರ ರಾಹುಲ್ ದ್ರಾವಿಡ್, ದೇಶದಲ್ಲಿ ಕ್ರಿಕೆಟ್ ಗೆ ಸಾಕಷ್ಟು ಕೊಡುಗೆ ನೀಡಿದ್ದು,ಸಚಿನ್ ತೆಂಡೊಲ್ಕರ್ ಅವರಿಗೆ ಹೋಲಿಸಿಬಹುದಾದ ದೊಡ್ಡ ಪ್ರಭಾವ ಬೀರಿದ್ದರೂ ಅದಕ್ಕೆ ತಕ್ಕಂತ ಮನ್ನಣೆ ಸಿಗಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾ 79 ಏಕದಿನ ಪಂದ್ಯಗಳ ಪೈಕಿಯಲ್ಲಿ 42 ರಲ್ಲಿ ಗೆಲುವು ಸಾಧಿಸಿತ್ತು. ಇದರಲ್ಲಿ ಚೇಸಿಂಗ್ ನಲ್ಲಿ ಸತತ 14 ಗೆಲುವುಗಳ ವಿಶ್ವದಾಖಲೆಯೂ ಸೇರಿತ್ತು. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ 47 ವರ್ಷದ ರಾಹುಲ್ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಿತ್ತು.

ರಾಹುಲ್ ದ್ರಾವಿಡ್ ನಾಯಕತ್ವಕ್ಕೆ ನಾವು ಸೂಕ್ತ ಮನ್ನಣೆ ನೀಡದಿದ್ದು ದುರದೃಷ್ಟಕರ. ನಾವು ಸೌರವ್ ಗಂಗೂಲಿ, ಎಂಎಸ್ ಧೋನಿ ಈಗ ವಿರಾಟ್ ಕೊಹ್ಲಿ ಬಗ್ಗೆ ಮಾತ್ರ ಮಾತನಾಡುತ್ತೇವೆ. ಆದರೆ, ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಅದ್ಬುತ ನಾಯಕರಾಗಿದ್ದರು ಎಂದು ಸ್ಟಾರ್ ಸ್ಫೋರ್ಟ್ ನಲ್ಲಿ ಕ್ರಿಕೆಟ್ ಸಂಬಂಧಿಸಿದ ಶೋ ನಲ್ಲಿ ಗಂಭೀರ್ ಹೇಳಿದ್ದಾರೆ.

ಶ್ರೇಷ್ಠ ಅಂಡರ್ ರೇಟೆಡ್ ಕ್ರಿಕೆಟರ್ , ಅಂಡರ್ ರೇಟೆಡ್ ನಾಯಕರಾಗಿದ್ದ ರಾಹುಲ್ ದ್ರಾವಿಡ್, ಅವರ ನಾಯಕತ್ವದಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ  ಗೆಲುವು ಸಾಧಿಸಿದ್ದೇವು.ಸತತವಾಗಿ 14ರಿಂದ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇವು. ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 13288 ಹಾಗೂ 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ ಎಂದು ಹೇಳಿದರು.

2016ರಿಂದ 2019ರವರೆಗೂ ಅಂಡರ್ -19 ಮತ್ತು ಭಾರತ ಎ ಟೀಮ್ ನ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ.

2007ಹಾಗೂ 2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ ಇಬ್ಬರೂ ಇದ್ದರು. ಗಂಗೂಲಿ, ಸಚಿನ್ ಗಿಂತಲೂ ದ್ರಾವಿಡ್ ಅವರ ಪರಿಣಾಮ ಹೆಚ್ಚಿನದಾಗಿದೆ ಎಂಬುದು ತಮ್ಮ ಅನಿಸಿಕೆಯಾಗಿರುವುದಾಗಿ ಗಂಭೀರ್ 
ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com