ರಾಹುಲ್ ದ್ರಾವಿಡ್‌-ಸೌರವ್‌ ಸಂಮಿಶ್ರಣವೇ ಎಂಎಸ್ ಧೋನಿ: ಲಾಲ್‌ಚಂದ್

ಗ್ರೇಗ್‌ ಚಾಪೆಲ್‌ ಟೀಂ ಇಂಡಿಯಾ ಕೋಚ್‌ ಸ್ಥಾನದಿಂದ ಅಚಾನಕ್ಕಾಗಿ ಕೆಳಗಿಳಿದ ಸಂದರ್ಭದಲ್ಲಿ (2007) ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ಮಾಜಿ ಕ್ರಿಕೆಟಿಗ ಲಾಲ್‌ಚಂದ್‌ ರಜಪೂತ್‌ ಅವರನ್ನು ಭಾರತ ತಂಡದ ಮ್ಯಾನೇಜರ್‌ ಆಗಿ ಬಿಸಿಸಿಐ ನೇಮಕ ಮಾಡಿತ್ತು. 
ದ್ರಾವಿಡ್-ಧೋನಿ-ಗಂಗೂಲಿ
ದ್ರಾವಿಡ್-ಧೋನಿ-ಗಂಗೂಲಿ

ನವದೆಹಲಿ: ಗ್ರೇಗ್‌ ಚಾಪೆಲ್‌ ಟೀಂ ಇಂಡಿಯಾ ಕೋಚ್‌ ಸ್ಥಾನದಿಂದ ಅಚಾನಕ್ಕಾಗಿ ಕೆಳಗಿಳಿದ ಸಂದರ್ಭದಲ್ಲಿ (2007) ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ಮಾಜಿ ಕ್ರಿಕೆಟಿಗ ಲಾಲ್‌ಚಂದ್‌ ರಜಪೂತ್‌ ಅವರನ್ನು ಭಾರತ ತಂಡದ ಮ್ಯಾನೇಜರ್‌ ಆಗಿ ಬಿಸಿಸಿಐ ನೇಮಕ ಮಾಡಿತ್ತು. 

ಭಾರತ ತಂಡ ಅಂದು ಚೊಚ್ಚಲ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆದ್ದ ದಿನದಿಂದಲೂ ಕ್ಯಾಪ್ಟನ್‌ ಕೂಲ್ ಎಂಎಸ್‌ ಧೋನಿ ಅವರ ನಾಯಕತ್ವದ ಗುಣಗಳನ್ನು ಕಾಣುತ್ತಾ ಬಂದಿರುವ ಲಾಲ್‌ಚಂದ್‌ ರಜಪೂತ್, ಇದೀಗ ಧೋನಿ ಅಪ್ರತಿಮ ನಾಯಕನಾಗಿ ಬೆಳೆಯಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ.

ಧೋನಿ ನಾಯಕತ್ವದ ಯಶಸ್ಸಿನ ಹಿಂದೆ ಸೌರವ್‌ ಗಂಗೂಲಿ ಅವರ ಪ್ರಭಾವದ ಬಗ್ಗೆ ರಜಪೂತ್‌ ವಿವರಣೆ ನೀಡಿದ್ದರೆ. ಅಂದು ಸೌರವ್‌ ಗಂಗೂಲಿ ಭಾರತ ತಂಡದ ಮನಸ್ಥಿತಿಯನ್ನು ಬದಲಾಯಿಸಿದರು ಎಂದಿರುವ ರಜಪೂತ್‌, ಸೌರವ್‌ ಹಾಕಿಕೊಟ್ಟ ಭದ್ರ ಅಡಿಪಾಯದ ಬಲದಿಂದಲೇ ಧೋನಿ ಯಶಸ್ಸಿನ ಹೆಜ್ಜೆಯಿಡಲು ಸಾಧ್ಯವಾಯಿತು ಎಂದಿದ್ದಾರೆ.

ಅಂದಹಾಗೆ ಟೀಮ್‌ ಇಂಡಿಯಾದಲ್ಲಿ ಧೋನಿ ಉದಯವಾಗಲು ಸೌರವ್‌ ಕಾರಣ ಎಂಬುದು ವಿಶೇಷ. 2004ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿಯನ್ನು ಮಧ್ಯಮ ಕ್ರಮಾಂಕದಿಂದ ಬಡ್ತಿ ನೀಡಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೌರವ್‌ ಮಾಡಿದ್ದರು. ವೈಝಾಗ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಧೋನಿ ಪಾಕಿಸ್ತಾನ ವಿರುದ್ಧ 148 ರನ್‌ ಚಚ್ಚಿ ಅಬ್ಬರಿಸಿದ್ದರು.

"ಗಂಗೂಲಿ ಆಟಗಾರರಿಗೆ ಆತ್ಮವಿಶ್ವಾಸ ತುಂಬುತ್ತಿದ್ದರು. ಭಾರತ ತಂಡದ ಆಟಗಾರರ ಮನಸ್ಥಿತಿಯನ್ನು ಬದಲಾಯಿಸಿದ್ದೇ ಗಂಗೂಲಿ. ಬಳಿಕ ಧೋನಿ ಅದನ್ನೇ ಮುಂದುವರಿಸಿದರು. ಈಗ ತಂಡದಲ್ಲಿ ಹೊಸ ಪ್ರತಿಭೆಯ ಆಗಮನವಾಗಿ ಆತನಲ್ಲಿ ಸಾಮರ್ಥ್ಯವಿದೆ ಎಂಬುದು ಗೊತ್ತಾದರೆ ಅಗತ್ಯದ ಅವಕಾಶಗಳನ್ನು ನೀಡುವ ಕೆಲಸವನ್ನು ಧೋನಿ ಕೂಡ ಮಾಡುತ್ತಿದ್ದಾರೆ," ಎಂದು ಸ್ಪೋರ್ಟ್ಸ್‌ ಕೀಡಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲಾಲ್‌ಚಂದ್‌ ಹೇಳಿದ್ದಾರೆ.

ಎಲ್ಲಾ ಮಾದರಿಯಲ್ಲಿ ಧೋನಿ ಭಾರತ ತಂಡದ ನಾಯಕತ್ವ ಪಡೆಯುವುದಕ್ಕೂ ಮುನ್ನ ಗಂಗೂಲಿ, ರಾಹುಲ್ ದ್ರಾವಿಡ್‌ ಮತ್ತು ಅನಿಲ್‌ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಆಡಿದ್ದಾರೆ. ಧೋನಿಯ ಸ್ಥಿರತೆ ಗಮನಿಸಿದರೆ ಅವರ ನಾಯಕತ್ವದಲ್ಲಿ ಗಂಗೂಲಿ ಮತ್ತು ದ್ರಾವಿಡ್‌ ಅವರಲ್ಲಿನ ಗುಣಗಳ ಸಂಮಿಶ್ರಣವನ್ನು ಕಾಣಬಹುದಾಗಿದೆ ಎಂದು ರಜಪೂತ್‌ ಅಭಿಪ್ರಾಯ ಪಟ್ಟಿದ್ದಾರೆ.

"ಧೋನಿ ಬಹಳ ಶಾಂತ ಸ್ವಭಾವದ ನಾಯಕ. ಆನ್‌ಫೀಲ್ಡ್‌ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರು ಎರಡು ಹೆಜ್ಜೆ ಮುಂದಿರುತ್ತಾರೆ. ಬಹಳ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಾಯಕ. ಗಂಗೂಲಿ ಮತ್ತು ದ್ರಾವಿಡ್‌ ಅವರ ಸಂಮಿಶ್ರಣ ಎನ್ನಬಹದು. ಗಂಗೂಲಿ ಹೆಚ್ಚು ಆಕ್ರಮಣಕಾರಿ ಸ್ವಭಾವದ ನಾಯಕ ಹಾಗೂ ಅಷ್ಟೇ ಧನಾತ್ಮಕ ಆಲೋಚನೆಗಳು ಅವರಲ್ಲಿತ್ತು  ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com