ಪವಿತ್ರ ಗಂಗೆಯಲ್ಲಿ ಮಿಂದ ಜಾಂಟಿ ರೋಡ್ಸ್, ಹಿಂದೂ ಧಾರ್ಮಿಕ ನಂಬಿಕೆ ಬಗ್ಗೆ ಹೇಳಿದ್ದೇನು?

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ.
ಜಾಂಟಿ ರೋಡ್ಸ್
ಜಾಂಟಿ ರೋಡ್ಸ್

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ. 

ರಿಷಿಕೇಷದಲ್ಲಿ ಗಂಗೆಯಲ್ಲಿ ಸ್ನಾನ ಮಾಡುತ್ತಾ ನಮಸ್ಕರಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಜಾಂಟಿ ರೋಡ್ಸ್ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿರೋದರಿಂದ ಆಧ್ಯಾತ್ಮಿಕ ಹಾಗೂ ದೈಹಿಕ ಶಕ್ತಿ ವೃದ್ಧಿಗೆ ಪ್ರಯೋಜನವಾಗಲಿದೆ ಎಂದು ಬರೆದುಕೊಂಡಿದ್ದಾರೆ. 

ಜಾಂಟಿ ರೋಡ್ಸ್ ಗೆ ಭಾರತದ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಆಗಾಗ ಭಾರತದ ಪ್ರವಾಸ ಕೈಗೊಳ್ಳುವ ಅವರು ಇಡೀ ದೇಶವನ್ನು ಸುತ್ತುತ್ತಾರೆ. 

ಇದೇ ಅಲ್ಲದೆ ತಮ್ಮ ಮಗಳಿಗೆ ಇಂಡಿಯಾ ಅಂತಲೂ ಹೆಸರನ್ನು ಇಟ್ಟಿದ್ದಾರೆ. ಐಪಿಎಲ್ ಫ್ರಾಂಚೈಸಿ ತಂಡ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com