ಐಪಿಎಲ್ ಬಹುಮಾನ ಅರ್ಧದಷ್ಟು ಕಡಿತ: ಬಿಸಿಸಿಐ ಜತೆ ಚರ್ಚೆಗೆ ಮುಂದಾದ ಅತೃಪ್ತ ತಂಡಗಳು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಹುಮಾನದ ಮೊತ್ತವನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಇದರಿಂದ ತೀವ್ರ ಅಸಮಾಧಾನಗೊಂಡಿರುವ ಫ್ರಾಂಚೈಸಿಗಳು ಬಿಸಿಸಿಐ ಜೊತೆ ಚರ್ಚೆ ನಡೆಸಲು ಮುಂದಾಗಿವೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಹುಮಾನದ ಮೊತ್ತವನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಇದರಿಂದ ತೀವ್ರ ಅಸಮಾಧಾನಗೊಂಡಿರುವ ಫ್ರಾಂಚೈಸಿಗಳು ಬಿಸಿಸಿಐ ಜೊತೆ ಚರ್ಚೆ ನಡೆಸಲು ಮುಂದಾಗಿವೆ.

ಎಂಟು ಫ್ರಾಂಚೈಸಿಗಳು ಬಿಸಿಸಿಐನ ಈ ಅನಿರೀಕ್ಷಿತ ನಿರ್ಧಾರದ ಬಗ್ಗೆ ಅಸಮಾಧಾನಗೊಂಡಿದ್ದು, ಈ ಸಂಬಂಧ ನಮ್ಮೊಂದಿಗೆ ಬಿಸಿಸಿಐ ಯಾವುದೇ ಚರ್ಚೆ ಸಹ ನಡೆಸಿಲ್ಲ. ಈ ಬಗ್ಗೆ ಫ್ರಾಂಚೈಸಿಗಳು ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಎಲ್ಲರೂ ಸೇರಿ ಬಿಸಿಸಿಐ ಜತೆ ಅಧಿಕೃತವಾಗಿ ಚರ್ಚೆ ನಡೆಸುತ್ತೇವೆ ಎಂದು ದಕ್ಷಿಣ ಮೂಲದ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದು ನಮಗೆ ದೊಡ್ಡ ಹೊಡೆತ. ಬಿಸಿಸಿಐನ ಈ ನಿರ್ಧಾರದ ಬಗ್ಗೆ ನಾವು ಆಂತರಿಕವಾಗಿ ಚರ್ಚಿಸುತ್ತಿದ್ದೇವೆ. ಎಲ್ಲಾ ತಂಡಗಳು ಒಟ್ಟಿಗೆ ಸೇರಿ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಮತ್ತೊಂದು ಫ್ರಾಂಚೈಸಿಯ ಅಧಿಕಾರಿ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಬರೊಬ್ಬರಿ ಶೇ.50ರಷ್ಟು ಕಡಿತ ಮಾಡಿದ್ದು, ಅದರಂತೆ ಚಾಂಪಿಯನ್ ತಂಡಕ್ಕೆ ಈ ಹಿಂದೆ ನೀಡಲಾಗುತ್ತಿದ್ದ 25 ಕೋಟಿ ರೂ ಬದಲಿಗೆ ಕೇವಲ 10 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಅಂತೆಯೇ ಈ ಹಿಂದೆ ರನ್ನರ್ ಅಪ್ ತಂಡಕ್ಕೆ ನೀಡಲಾಗುತ್ತಿದ್ದ 12.5 ಕೋಟಿ ರೂಗಳನ್ನು 6.25 ಕೋಟಿ ರೂಗಳಿಗೆ ಇಳಿಸಲಾಗಿದೆ. ಅಂತೆಯೇ ಸೆಮಿ ಫೈನಲ್ ನಲ್ಲಿ ಸೋಲುಕಂಡ ಕ್ವಾಲಿಫೈಯರ್ ತಂಡಗಳಿಗೆ ತಲಾ 4.3 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಬಿಸಿಸಿಐ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com