ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐಪಿಎಲ್ ಮೇಲೆ ಕೊರೋನಾ ಕರಿ ನೆರಳು, ಏ.15ರವರೆಗೂ ವಿದೇಶಿ ಆಟಗಾರರಿಲ್ಲ, ಸ್ಥಳೀಯರಿಗೆ ಹಬ್ಬ!

ಭಾರಿ ನಿರೀಕ್ಷೆ ಹುಟ್ಟಿಸಿರುವ ಐಪಿಎಲ್ 2020ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೊರೋನಾ ಭೀತಿ ಕಾಡುತ್ತಿದ್ದು, ಇದೇ ಕಾರಣಕ್ಕೆ ಏಪ್ರಿಲ್ 15ರವರೆಗೂ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಮುಂಬೈ: ಭಾರಿ ನಿರೀಕ್ಷೆ ಹುಟ್ಟಿಸಿರುವ ಐಪಿಎಲ್ 2020ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೊರೋನಾ ಭೀತಿ ಕಾಡುತ್ತಿದ್ದು, ಇದೇ ಕಾರಣಕ್ಕೆ ಏಪ್ರಿಲ್ 15ರವರೆಗೂ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಮೂಲಗಳ ಪ್ರಕಾರ ಕೊರೋನಾ ವೈರಸ್ ಪೀಡಿತ ವಿವಿಧ ದೇಶಗಳ ಮೇಲೆ ಭಾರತ ಸರ್ಕಾರ ವೀಸಾ ನಿರ್ಬಂಧ ಹೇರಿದ್ದು, ಇದೇ ಕಾರಣಕ್ಕೆ ಬಿಸಿಸಿಐ ಕೂಡ ವಿದೇಶ ಆಟಗಾರರಿಗೆ ನಿರ್ಬಂಧ ಹೇರಿದೆ ಎನ್ನಲಾಗಿದೆ. ಪ್ರಮುಖವಾಗಿ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಆಟಗಾರರ ವೀಸಾ ಬಿಸಿನೆಸ್ ವೀಸಾ ವಿಭಾಗದಡಿಯಲ್ಲಿ ಬರುವುದರಿಂದ ಯಾವುದೇ ವಿದೇಶಿ ಆಟಗಾರರೂ ಏಪ್ರಿಲ್ 15 ಭಾರತ ಪ್ರವೇಶ ಅಸಾಧ್ಯ. ಇದೇ ಕಾರಣಕ್ಕೆ ಬಿಸಿಸಿಐ ವಿದೇಶ ಆಟಗಾರರ ಮೇಲೆ ನಿರ್ಬಂಧ ಹೇರಿದೆ ಎನ್ನಲಾಗಿದೆ.

ಇದೇ ಮಾರ್ಚ್ 14ರಿಂದ ಐಪಿಎಲ್ 2020 ಟೂರ್ನಿ ಆರಂಭವಾಗಲಿದೆ.

ಇತ್ತೀಚೆಗಷ್ಟೇ ಕೋರಾನಾ ವೈರಸ್ ಪರಿಣಾಮ ಕೇಂದ್ರ ವಿದೇಶಾಂಗ ಇಲಾಖೆ ರಾಯಭಾರಿಗಳು, ಕೇಂದ್ರ ಸರ್ಕಾರಿ ಅಧಿಕಾರಿಗಳು, ಸಚಿವರನ್ನು, ಉನ್ನತಾಧಿಕಾರಿಗಳನ್ನು ಹೊರತ ಪಡಿಸಿ, ಎಲ್ಲ ರೀತಿಯ ವಿದೇಶಿ ವಿಸಾಗಳಿಗೆ ನಿರ್ಬಂದ ಹೇರಿತ್ತು. 

Related Stories

No stories found.

Advertisement

X
Kannada Prabha
www.kannadaprabha.com