ದೃಢವಾಗಿರಿ, ಕೊರೋನಾ ವೈರಸ್ ವಿರುದ್ಧ ಹೋರಾಡೋಣ: ವಿರಾಟ್ ಕೊಹ್ಲಿ ಕರೆ

ಜಾಗತಿಕವಾಗಿ ಹರಡುತ್ತಿರುವ ಹಾಗೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿರುವ ಕೋವಿಡ್ -19 ಬಗ್ಗೆ ಇದೇ ಮೊದಲ ಬಾರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಜಾಗತಿಕವಾಗಿ ಹರಡುತ್ತಿರುವ ಹಾಗೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿರುವ ಕೋವಿಡ್ -19 ಬಗ್ಗೆ ಇದೇ ಮೊದಲ ಬಾರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ಕೊಹ್ಲಿ, ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವಂತೆ ಪೆಂಡೆಮಿಕ್(ಜಾಗತಿಕ ಪಿಡುಗು) ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಲು ಜಾಗರೂಕತೆಯಿಂದ ಇರುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಶನಿವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕೊಹ್ಲಿ, ಕೊರೋನಾ ವೈರಸ್ ತಡೆಗಟ್ಟಲು ಮುಖ್ಯವಾಗಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಜಾಗರೂಕತೆಯಿಂದಿರುವಂತೆ ಕೋರಿದ್ದಾರೆ.

"ದೃಢವಾಗಿರಿ, ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ -19 ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸೋಣ. ಸುರಕ್ಷಿತವಾಗಿರಿ, ಜಾಗರೂಕತೆವಹಿಸಿ, ಮುಖ್ಯವಾಗಿ ನೆನಪಿಡಿ ಗುಣಪಡಿಸುವುದಕ್ಕಿಂತಲು ಮುನ್ನೆಚ್ಚರಿಕೆ ಕ್ರಮ ಒಳಿತು. ಹೀಗಾಗಿ ಎಲ್ಲರು ಸುರಕ್ಷಿತವಾಗಿರಿ" ಎಂದು ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com