ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!

ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟೈಲಿಸ್ಟ್‌ ಆಲ್‌ರೌಂಡರ್‌ ಡ್ವೆನ್‌ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್  ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

Published: 28th March 2020 08:59 PM  |   Last Updated: 28th March 2020 09:00 PM   |  A+A-


DwayneBravo1

ಡ್ವೆನ್‌ ಬ್ರಾವೋ

Posted By : Nagaraja AB
Source : UNI

ನವದೆಹಲಿ: ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟೈಲಿಸ್ಟ್‌ ಆಲ್‌ರೌಂಡರ್‌ ಡ್ವೆನ್‌ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್  ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಡಿಜೆ ಬ್ರಾವೊ ಎಂದೇ ಕರೆಸಿಕೊಳ್ಳುವ ವೆಸ್ಟ್‌ ಇಂಡೀಸ್‌ನ ಈ ಆಟಗಾರ ರಾಪ್‌ ಹಾಡುಗಳನ್ನು ನಿರ್ಮಿಸುವುದರಲ್ಲಿ ನಿಸ್ಸೀಮರು. ಇದೀಗ ಅವರು ಕೊರೊನಾದಿಂದ ವಿಶ್ವವೇ ತಲ್ಲಣಗೊಂಡಿರುವ ಸಂದರ್ಭದಲ್ಲಿ ಅದರ ಬಗ್ಗೆಯೇ ಹಾಡು ರಚಿಸಿ ಹಾಡಿದ್ದಾರೆ. 

3 ನಿಮಿಷ 31 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ನಿತ್ಯ ಕೈಗಳನ್ನು ತೊಳೆದುಕೊಳ್ಳುವುದು, ಮನೆಯಲ್ಲಿಯೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಅಗತ್ಯ ಮುಂಜಾಗ್ರತಾ ಕ್ರಮಗಳ ಮೂಲಕ ಕೊರೋನಾವೈರಸ್ ವಿರುದ್ಧ ಹೋರಾಡುವಂತೆ ಜನತೆಯಲ್ಲಿ ಬ್ರಾವೋ ಮನವಿ ಮಾಡಿಕೊಂಡಿದ್ದಾರೆ.

 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp