ಅಂದು ವಿಶ್ವಕಪ್ ಹೀರೋ, ಇಂದು ವಿಶ್ವಕ್ಕೇ ಹೀರೋ: ಜೋಗಿಂದರ್ ಶರ್ಮಾಗೆ ಸೆಲ್ಯೂಟ್ ಹೊಡೆದ ಐಸಿಸಿ

2007ರಲ್ಲಿ ಕೊನೆಯ ಓವರ್ ನಲ್ಲಿ ಜಾದೂ ಮಾಡಿ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟಿದ್ದ ಜೋಗಿಂದರ್ ಶರ್ಮಾ ಇದೀಗ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲೂ ಮುಂದಾಳತ್ವ ವಹಿಸಿ ಐಸಿಸಿಯಿಂದ ಸಲಾಂ ಮಾಡಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2007ರಲ್ಲಿ ಕೊನೆಯ ಓವರ್ ನಲ್ಲಿ ಜಾದೂ ಮಾಡಿ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟಿದ್ದ ಜೋಗಿಂದರ್ ಶರ್ಮಾ ಇದೀಗ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲೂ ಮುಂದಾಳತ್ವ ವಹಿಸಿ ಐಸಿಸಿಯಿಂದ ಸಲಾಂ ಮಾಡಿಸಿಕೊಂಡಿದ್ದಾರೆ.

ಹೌದು.. 2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕೊನೆ ಓವರ್‌ ಎಸೆದಿದ್ದ ಜೋಗಿಂದರ್‌ ಶರ್ಮಾ, ಇದೀಗ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಎದುರಾಗಿರುವ ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೇರಲಾಗಿರುವ ಲಾಕ್  ಡೌನ್ ಸರಿಯಾದ ನಿರ್ವಹಣೆಯ ಜವಾಬ್ದಾರಿ ಜೋಗಿಂದರ್ ಶರ್ಮಾ ಮೇಲಿದ್ದು, ಇದೇ ಕಾರಣಕ್ಕೆ ಐಸಿಸಿ ಜೋಗಿಂದರ್ ಶರ್ಮಾರನ್ನು ಶ್ಲಾಘಿಸಿದೆ. 

ಈ ಕುರಿತಂತೆ ಟ್ವೀಟ್ ಮಾಡಿರುವ ಐಸಿಸಿ, ಅಂದು 2007ರಲ್ಲಿ ಟಿ20 ವಿಶ್ವಕಪ್ ಹೀರೋ, ಇಂದು 2020ರಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೇ ಹೀರೋ ಎಂದು ಟ್ವೀಟ್ ಮಾಡಿದೆ.  ಹರ್ಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಆಗಿರುವ ಜೋಗಿಂದರ್‌, ಹಿಸಾರ್‌ನಲ್ಲಿ  ಕಾರ್ಯನಿರ್ವಹಿಸುತ್ತಿದ್ದರೆ, ಎಸಿಪಿ ಅಖಿಲ್‌ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. 

ಈ ಕುರಿತಂತೆ ಟ್ವೀಟ್ ಮಾಡಿರುವ ಜೋಗಿಂದರ್ ಶರ್ಮಾ, 'ನಾನು 2007ರಿಂದಲೂ ಡಿಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಈ ರೀತಿಯ ಸವಾಲನ್ನು ಎದುರಿಸಿಲ್ಲ. ಮುನ್ನೆಚ್ಚರಿಕೆಯೊಂದೇ ಕೊರೋನಾ ವಿರುದ್ಧ ಬಚಾವಾಗಲು ಸದ್ಯಕ್ಕಿರುವ ದಾರಿ. ಎಲ್ಲರೂ ಸಹಕರಿಸಿ ಎಂದು  ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com