ಬ್ರಿಯಾನ್‌ ಲಾರಾಗೆ ಸರಿಸಾಟಿ ವಿರಾಟ್ ಕೊಹ್ಲಿ‌: ಕುಕ್

ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ರಿಯಾನ್‌ ಲಾರಾ ಅವರ ಬ್ಯಾಟಿಂಗ್‌ ತಂತ್ರಗಾರಿಕೆಗೆ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸರಿಸಾಟಿಯಾಗಬಲ್ಲರು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಸರ್‌ ಅಲಸ್ಟೈರ್‌ ಕುಕ್‌ ಹೇಳಿದ್ದಾರೆ.
ಅಲಸ್ಟೈರ್‌ ಕುಕ್
ಅಲಸ್ಟೈರ್‌ ಕುಕ್

ಲಂಡನ್: ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ರಿಯಾನ್‌ ಲಾರಾ ಅವರ ಬ್ಯಾಟಿಂಗ್‌ ತಂತ್ರಗಾರಿಕೆಗೆ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸರಿಸಾಟಿಯಾಗಬಲ್ಲರು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಸರ್‌ ಅಲಸ್ಟೈರ್‌ ಕುಕ್‌ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇನಿಂಗ್ಸ್‌ ಒಂದರಲ್ಲಿ 400 ರನ್‌ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರ್‌ನ ವಿಶ್ವ ದಾಖಲೆ ಹೊಂದಿರುವ ಬ್ರಿಯಾನ್‌ ಚಾರ್ಲ್ಸ್‌ ಲಾರಾ, ವೆಸ್ಟ್‌ ಇಂಡೀಸ್‌ ಪರ 131 ಟೆಸ್ಟ್‌ ಪಂದ್ಯಗಳಲ್ಲಿ 11,953 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ 299 ಪಂದ್ಯಗಳನ್ನಾಡಿ 10,405 ರನ್‌ಗಳನ್ನು ಬಾರಿಸಿದ್ದಾರೆ.

ಇದೀಗ ಸಂಡೇ ಟೈಮ್ಸ್‌ ಜೊತೆಗಿನ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಕುಕ್‌, 2004ರಲ್ಲಿ ನಡೆದ ಪ್ರವಾಸ ಪಂದ್ಯವೊಂದರಲ್ಲಿ ಬ್ರಿಯಾನ್‌ ಲಾರಾ ಅವರು ಬಾರಿಸಿದ್ದ ಶತಕವೊಂದನ್ನು ಸ್ಮರಿಸಿದ್ದಾರೆ.

"2004ರಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ ಎಂಸಿಸಿ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತ್ತು. ಅಂದು ಎಂಸಿಸಿ ತಂಡದಲ್ಲಿ ನಾನು ಕೂಡ ಆಡಿದ್ದೆ. ನಮ್ಮ ತಂಡದಲ್ಲಿ ಸೈಮನ್‌ ಜೋನ್ಸ್‌, ಮ್ಯಾಥ್ಯೂ ಹೊಗಾರ್ಡ್‌ ಮತ್ತು ಮಿನ್‌ ಪಟೇಲ್‌ ಅವರಂತಹ ಉತ್ತಮ ಬೌಲರ್‌ಗಳಿದ್ದರು. ಎಲ್ಲರೂ ಇಂಗ್ಲೆಂಡ್‌ ತಂಡದ ಆಟಗಾರರು. ಅವರೆಲ್ಲರ ಎದುರು ಲಾರಾ ಅದ್ಭುತವಾಗಿ ಬ್ಯಾಟ್‌ ಮಾಡಿದ್ದರು," ಎಂದು 2004ರ ಪಂದ್ಯವನ್ನು ಕುಕ್‌ ಸ್ಮರಿಸಿದ್ದಾರೆ.

ಇದೇ ವೇಳೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯಿಂದ ಲಾರಾ ರೀತಿಯ ತಂತ್ರಗಾರಿಕೆಯಲ್ಲಿ ಬ್ಯಾಟ್‌ ಮಾಡಲು ಸಾಧ್ಯ. ಅವರಂತೆ ಪ್ರತಿಭಾಶಾಲಿ ಆಟಗಾರ ಎಂದು ಕುಕ್‌ ಹೊಗಳಿದ್ದಾರೆ. ಕೊಹ್ಲಿ ಹೊರತಾಗಿ, ರಿಕಿ ಪಾಂಟಿಂಗ್, ಜಾಕ್‌ ಕಾಲಿಸ್‌ ಮತ್ತು ಕುಮಾರ ಸಂಗಕ್ಕಾರ ಅವರಲ್ಲಿ ಇಂಥದ್ದೊಂದು ಪ್ರತಿಭೆ ಅಡಕವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com