ಭಾರತೀಯ ಆಟಗಾರರ ಐಪಿಎಲ್, ಅದಕ್ಕೆ ಮುಷ್ತಾಕ್ ಅಲಿ ಟ್ರೋಫಿ ಇದೆ: ಸಿಎಸ್‌ಕೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಟೂರ್ನಿ ನಡೆಯುತ್ತದೆಯೋ ಎಂಬ ಸಂಶಯ ಮೂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಟಗಾರರನ್ನೊಳಗೊಂಡ ಐಪಿಎಲ್ ಟೂರ್ನಿ ನಡೆಸುವ ಕುರಿತಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಂಡ ಮುಂದಿಟ್ಟಿದ್ದ ಕಲ್ಪನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಿರಸ್ಕರಿಸಿದೆ. 
ಸಿಎಸ್ ಕೆ
ಸಿಎಸ್ ಕೆ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಟೂರ್ನಿ ನಡೆಯುತ್ತದೆಯೋ ಎಂಬ ಸಂಶಯ ಮೂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಟಗಾರರನ್ನೊಳಗೊಂಡ ಐಪಿಎಲ್ ಟೂರ್ನಿ ನಡೆಸುವ ಕುರಿತಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಂಡ ಮುಂದಿಟ್ಟಿದ್ದ ಕಲ್ಪನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಿರಸ್ಕರಿಸಿದೆ. 

ಆಸ್ಟ್ರೇಲಿಯಾದಲ್ಲಿ ನಿಗದಿತ ಟಿ20 ವಿಶ್ವಕಪ್ ನಡೆಯದಿದ್ದರೆ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ಐಪಿಎಲ್ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಯಬಹುದು.

ಕೇವಲ ಭಾರತೀಯ ಆಟಗಾರರೊಂದಿಗೆ ಐಪಿಎಲ್ ಮಾಡಲು ಉತ್ಸುಕನಾಗಿಲ್ಲ. ಕಾರಣ ಅದಾಗಲೇ ಸೈಯದ್ ಮುಷ್ತಾಕ್ ಅಲಿ ಟೂರ್ನಿ ದೇಶೀಯ ಟಿ20 ಆಗಿರುವುದರಿಂದ ಮತ್ತೊಂದು ಸ್ಥಳೀಯ ಟೂರ್ನಿಯ ಅವಶ್ಯಕತೆ ಇಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿದೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದು ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ನಂತರದ ಅತ್ಯಂತ ಯಶಸ್ವಿ ತಂಡವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com