ಸ್ಥಳೀಯ ಅಂಪೈರ್‌ಗಳ ಅನನುಭವದಿಂದಾಗಿ ಟೆಸ್ಟ್‌ನಲ್ಲಿ ಹೆಚ್ಚುವರಿ ರಿವ್ಯೂಗೆ ಶಿಫಾರಸು ಮಾಡಲಾಗಿತ್ತು: ಅನಿಲ್ ಕುಂಬ್ಳೆ

ಕೋವಿಡ್ -19 ಸಾಂಕ್ರಾಮಿಕ ರೋಗದ ಬಳಿಕ ಕ್ರಿಕೆಟ್ ಪುನರಾರಂಭಗೊಂಡ ನಂತರ ಟೆಸ್ಟ್ ಪಂದ್ಯಗಳಿಗೆ ಸ್ಥಳೀಯ ಅಂಪೈರ್ ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ವಿಮರ್ಶೆಗೆ ಶಿಫಾರಸು ಮಾಡಲಾಗಿದೆ ಎಂದು ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ. 
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಬಳಿಕ ಕ್ರಿಕೆಟ್ ಪುನರಾರಂಭಗೊಂಡ ನಂತರ ಟೆಸ್ಟ್ ಪಂದ್ಯಗಳಿಗೆ ಸ್ಥಳೀಯ ಅಂಪೈರ್ ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ವಿಮರ್ಶೆಗೆ ಶಿಫಾರಸು ಮಾಡಲಾಗಿದೆ ಎಂದು ಐಸಿಸ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ. 

ಕೋವಿಡ್ 19 ನಂತರದ ಸನ್ನಿವೇಶದಲ್ಲಿ ಚೆಂಡಿಗೆ ಹೊಳಪು ತರಲು ಉಗುಳು ಬಳಕೆ ಮಾಡಬಾರದು ಎಂಬ  ಶಿಫಾರಸು ಮಾಡುವುದರ ಜೊತೆಗೆ, ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚುವರಿ ಪರಿಶೀಲನೆಗಾಗಿ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಸೂಚಿಸಿದೆ.

ಐಸಿಸಿ ಕ್ರಿಕೆಟ್ ಸಮಿತಿಯ ಶಿಫಾರಸುಗಳನ್ನು ಅವಲೋಕಿಸಿ ನಂತರ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪ್ರಯಾಣದ ನಿರ್ಬಂಧ ಇರುವುದರಿಂದ ಸ್ಥಳೀಯ ಅಂಪೈರ್‌ಗಳನ್ನು ಬಳಸುವ ಸಲಹೆಯನ್ನು ನೀಡಲಾಗಿದೆ ಎಂದರು. 

ಕ್ರಿಕೆಟ್ ಅನ್ನು ಪ್ರಾರಂಭಿಸುವುದು ಸಮಯದ ಅವಶ್ಯಕತೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರಯಾಣದ ನಿರ್ಬಂಧ, ಕ್ವಾರಂಟೇನ್ ಮೂಲಕ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾವು ಭಾವಿಸಿದ್ದೇವೆ. ಇನ್ನು ಮಂಡಳಿಯಲ್ಲಿ ಸಾಕಷ್ಟು ಅನುಭವಿ ಅಂಪೈರ್‌ಗಳು ಇಲ್ಲ. ಆದ್ದರಿಂದ, ಕ್ರಿಕೆಟ್‌ಗೆ ಕಿಕ್‌ಸ್ಟಾರ್ಟ್ ಮಾಡಲು, ಸ್ಥಳೀಯ ಅಂಪೈರ್‌ಗಳನ್ನು ಬಳಸುವುದು ಉತ್ತಮ ಎಂದು ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಕನೆಕ್ಟೆಡ್‌ನಲ್ಲಿ ಕುಂಬ್ಳೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com