ಐಪಿಎಲ್ 2020: ರಾಜಸ್ಥಾನವನ್ನು ಮಣಿಸಿ ಎಂಟರಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದ ಕೆಕೆಆರ್, ಪ್ಲೇ ಆಫ್ ಕನಸು ಜೀವಂತ

ರಾಜಸ್ಥಾನ ರಾಯಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ 8 ರಿಂದ 4ನೇ ಸ್ಥಾನಕ್ಕೆ ಜಿಗಿಯುವ ಮೂಲಕ ತನ್ನ ಪ್ಲೇ ಆಪ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಅಂತೆಯೇ ಹಾಲಿ ಐಪಿಎಲ್ ಟೂರ್ನಿ ಮತ್ತಷ್ಟು ಕುತೂಹಲ  ಕೆರಳಿಸುವಂತೆ ಮಾಡಿದೆ.
ಕೋಲ್ಕತಾ ತಂಡದ ಜಯಭೇರಿ
ಕೋಲ್ಕತಾ ತಂಡದ ಜಯಭೇರಿ

ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ 8 ರಿಂದ 4ನೇ ಸ್ಥಾನಕ್ಕೆ ಜಿಗಿಯುವ ಮೂಲಕ ತನ್ನ ಪ್ಲೇ ಆಪ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಅಂತೆಯೇ ಹಾಲಿ ಐಪಿಎಲ್ ಟೂರ್ನಿ ಮತ್ತಷ್ಟು ಕುತೂಹಲ  ಕೆರಳಿಸುವಂತೆ ಮಾಡಿದೆ.

ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿದೆ. ಆದರೆ ಸರಣಿಯ ತನ್ನ ಅಂತಿಮ ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಇತರೆ ತಂಡಗಳ ಪ್ಲೇ ಆಫ್ ಕನಸಿಗೆ ಕುತ್ತು ತಂದು ಹಾಲಿ ಐಪಿಎಲ್ ಟೂರ್ನಿಯ ರಣ ರೋಚಕತೆಯನ್ನು  ಹೆಚ್ಚಿಸಿದೆ. ಇನ್ನು ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ 60 ರನ್ ಗಳ ಅಂತರದ ಭಾರಿ ಜಯ ಪಡೆದಿದೆ. ಆ ಮೂಲಕ ಅಂಕ ಪಟ್ಟಿಯಲ್ಲಿ ಏಕಾಏಕಿ 4 ಸ್ಥಾನಗಳ ಜಿಗಿತ ಕಂಡು 8 ರಿಂದ ನಾಲ್ಕನೇ ಸ್ಥಾನಕ್ಕೇರಿ ಪ್ಲೇ ಆಫ್ ಕನಸನ್ನು  ಜೀವಂತವಾಗಿರಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com