ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ರಾಹುಲ್ ದ್ರಾವಿಡ್ ಒಲವು

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಬೇಕೆಂದು ಪ್ರತಿಪಾದಿಸಿದ್ದಾರೆ.

ಎ ನ್ಯೂ ಇನ್ನಿಂಗ್ಸ್ ಪುಸ್ತಕದ ಬಿಡುಗಡೆಗಾಗಿ ಶುಕ್ರವಾರ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಿಕೊಳ್ಳಬೇಕು. ಅದು ಆಟಕ್ಕೆ ಒಳ್ಳೆಯದು ಎಂದು ದ್ರಾವಿಡ್ ಹೇಳಿದ್ದಾರೆ. 1900 ರಿಂದ ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಿರಲಿಲ್ಲ. ಆದರೆ, ಕೆಲವು ಸಮಯದಿಂದ, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎಂಬ ಸಮಾನ ಬೇಡಿಕೆಯಿದೆ ಎಂದಿದ್ದಾರೆ.

ಈ ಬಾರಿ ಐಪಿಎಲ್ ಭರ್ಜರಿ ಯಶಸ್ಸು ಕಂಡಿದ್ದು ಬಹಳ ಸಂತೋಷವಾಗಿದೆ. ಈ ಪ್ರಮಾಣದ ಯಶಸ್ಸು ಅದು ಕಾಣಲು ಸಾಧ್ಯವಾಗಿದ್ದು ಯುನೈಟೆಡ್ ಅರಬ್ ಎಮಿರೈಟ್ಸ್ ನಲ್ಲಿನ ಕ್ವಾಲಿಟಿ ಪಿಚ್ ಗಳಿಂದ, ಸ್ವಲ್ಪ ಯೋಜಿಸಿ ನೋಡಿ, ಯುಎಇಯಂಥ ಪಿಚ್ ಗಳನ್ನು ಒಲಿಂಪಿಕ್ಸ್ ಆಯೋಜಿಸುವ ದೇಶ ಒದಗಿಸಬಹುದಾದರೆ, ಕ್ರಿಕೆಟ್ ಅನ್ನು ಯಾಕೆ ಸೇರಿಸಬಾರದು? ಎಂದು ಪ್ರಶ್ನಿಸಿದರು. 

ದ್ರಾವಿಡ್ ಸಕ್ರಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಚ್ ಆಗಿ ಐಪಿಎಲ್ ಟೀಂಗಳಿಗೆ ಮೆಂಟರ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com