ಆರ್ ಸಿಬಿ ಗೆಲುವು: ಅಭಿಮಾನಿಗಳಿಂದ ಹಾಸ್ಯಭರಿತ ಮೀಮ್ಸ್!

ಸಂಘಟಿತ ಹೋರಾಟ ನಡೆಸಿ ಸೋಮವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 82 ರನ್‌ಗಳ ಭರ್ಜರಿ ಜಯ ದಾಖಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ  ಮೂರನೇ ಸ್ಥಾನಕ್ಕೇರಿದೆ. ಅದ್ಭುತ ಗೆಲುವಿನ ಬಳಿಕ ಆರ್‌ಸಿಬಿ ತಂಡ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರಿಂದ ಹಾಸ್ಯಭರಿತ ಮೀಮ್ಸ್‌ಗೆ ಗುರಿಯಾಗಿದೆ.

Published: 13th October 2020 11:26 AM  |   Last Updated: 13th October 2020 02:14 PM   |  A+A-


Kohli_ABD1

ವಿರಾಟ್ ಕೊಹ್ಲಿ, ಎಬಿಡಿವಿಲಿಯರ್ಸ್

Posted By : Nagaraja AB
Source : UNI

ಶಾರ್ಜಾ: ಸಂಘಟಿತ ಹೋರಾಟ ನಡೆಸಿ ಸೋಮವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 82 ರನ್‌ಗಳ ಭರ್ಜರಿ ಜಯ ದಾಖಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ  ಮೂರನೇ ಸ್ಥಾನಕ್ಕೇರಿದೆ. ಅದ್ಭುತ ಗೆಲುವಿನ ಬಳಿಕ ಆರ್‌ಸಿಬಿ ತಂಡ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರಿಂದ ಹಾಸ್ಯಭರಿತ ಮೀಮ್ಸ್‌ಗೆ ಗುರಿಯಾಗಿದೆ.

ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲೂ ಪಾರಮ್ಯ ಮೆರೆಯುವ ಮೂಲಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಸತತ ಎರಡನೇ ಗೆಲುವು ಸಾಧಿಸಿತು. ಟೂರ್ನಿಯ ಆರಂಭದಲ್ಲಿ ತಂಡದಲ್ಲಿ ಡೆತ್‌ ಬೌಲಿಂಗ್‌ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ತಂಡವು ಅತ್ಯುತ್ತಮ ಸಂಯೋಜನೆಯೊಂದಿಗೆ ಕಾಣುತ್ತಿದೆ. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್ ಬೆಂಗಳೂರಿಗೆ, ದೇವದತ್‌ ಪಡಿಕ್ಕಲ್‌ ಹಾಗೂ ಆರೋನ್‌ ಫಿಂಚ್‌ ಜೋಡಿ ಮೊದಲನೇ ವಿಕೆಟ್‌ಗೆ 67 ರನ್‌ಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಆರಂಭ ನೀಡಿತು.

 ಆರಂಭಿಕ ಜೋಡಿ ವಿಕೆಟ್‌ ಒಪ್ಪಿಸಿದ ಬಳಿಕ ಜತೆಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೋಡಿ ಸ್ಪೋಟಕ ಶತಕದ ಜತೆಯಾಟವಾಡಿತು. ಕಳೆದ ಪಂದ್ಯದಲ್ಲಿ ಬೇಗ ವಿಕೆಟ್‌ ಒಪ್ಪಿಸಿದ್ದ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. 33 ಎಸೆತಗಳಲ್ಲಿ 73 ರನ್‌ಗಳನ್ನು ಗಳಿಸಿದರು.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp