ಧೋನಿ ಆವೇಶಕ್ಕೆ ತಮ್ಮ ನಿರ್ಧಾರವನ್ನೇ ಬದಲಿಸಿದ ಅಂಪೈರ್‌, ಮಾಹೀ ನಡತೆಯನ್ನು ಖಂಡಿಸಿದ ಅಭಿಮಾನಿಗಳು, ವಿಡಿಯೋ!

ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. 
ಎಂಎಸ್-ಧೋನಿ-ರಶೀದ್
ಎಂಎಸ್-ಧೋನಿ-ರಶೀದ್

ದುಬೈ: ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯದ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ವೈಡ್‌ ವಿಚಾರವಾಗಿ ಎಂಎಸ್ ಧೋನಿ ಅಂಪೈರ್‌ ಮೇಲೆ ತೋರಿದ ನಡತೆಯನ್ನು ಬಲವಾಗಿ ಖಂಡಿಸಿದ್ದಾರೆ ಹಾಗೂ ಸಿಎಸ್‌ಕೆ ಫ್ರಾಂಚೈಸಿಯನ್ನು ರದ್ದು ಮಾಡಿ ಎಂದೆಲ್ಲಾ ಜರಿದಿದ್ದಾರೆ.

ಮಂಗಳವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 29ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 167 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 20 ರನ್‌ಗಳಿಂದ ಸಿಎಸ್‌ಕೆ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. 

ಆದರೆ, ಸನ್‌ರೈಸರ್ಸ್ ಹೈದರಾಬಾದ್‌ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಎಂಎಸ್‌ ಧೋನಿ ಹಾಗೂ ಅಂಪೈರ್‌ ನಡುವೆ ಈ ಘಟನೆ ನಡೆದಿತ್ತು. 18ನೇ ಓವರ್‌ನಲ್ಲಿ 19 ರನ್‌ಗಳನ್ನು ಗಳಿಸಿದ್ದ ಎಸ್ಆರ್‌ಎಚ್‌, ಕೊನೆಯ ಎರಡು ಓವರ್‌ಗಳಲ್ಲಿ 27 ರನ್‌ಗಳ ಅಗತ್ಯವಿತ್ತು, 19ನೇ ಓವರ್‌ನ ಮೊದಲನೇ ಎಸೆತದಲ್ಲಿ ಮೂರು ರನ್‌ಗಳನ್ನು ಗಳಿಸಿತ್ತು. 

ಶಾರ್ದೂಲ್‌ ಠಾಕೂರ್ ಅವರ ಎರಡನೇ ಎಸೆತದ ಮತ್ತೊಂದು ಪ್ರಯತ್ನದಲ್ಲಿ ಇನ್ನೊಂದು ವೈಡ್‌ ಹಾಕಿದ್ದರು, ಅದರಂತೆ ಅಂಪೈರ್‌ ರೀಫೆಲ್‌ ವೈಡ್‌ ಸಿಗ್ನಲ್‌ ಅರ್ಧಕ್ಕೆ ಕೈ ಎತ್ತಿದ್ದರು. ಆದರೆ, ಎಂಎಸ್‌ ಧೋನಿ ಕೋಪದ ಮುಖವನ್ನು ನೋಡಿದ ಬಳಿಕ, ತಮ್ಮ ನಿರ್ಧಾರವನ್ನು ಬದಲಿಸಿದರು. ಈ ವೇಳೆ ಎಂಎಸ್‌ ಧೋನಿ ಅಂಪೈರ್‌ ವಿರುದ್ಧ ಬೆದರಿಸುವ ಹಾಗೆ ವರ್ತಿಸಿದ್ದರು.

ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯವನ್ನು ಸುಲಭವಾಗಿ ಗೆಲುವು ಸಾಧಿಸಿತು. ಮೂರು ಬಾರಿ ಚಾಂಪಿಯನ್ಸ್ 20 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಜಯದ ಹಳಿಗೆ ಮರಳಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com