ಐಪಿಎಲ್ 2020: ಮುಂಬೈ ಗೆ ಸೋಲಿನ ‘ಸ್ಟೋಕ್’ ನೀಡಿದ ರಾಯಲ್ಸ್

ಆಲ್ ರೌಂಡರ್ ಬೆನ್ ಸ್ಟೋಕ್ಸ್ (ಅಜೇಯ 107) ಶತಕ ಹಾಗೂ ಸಂಜು ಸ್ಯಾಮ್ಸನ್ (ಅಜೇಯ 54) ಅರ್ಧಶತಕ ಇವರುಗಳ ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Published: 25th October 2020 11:33 PM  |   Last Updated: 25th October 2020 11:33 PM   |  A+A-


Posted By : Raghavendra Adiga
Source : UNI

ಅಬುದಾಬಿ: ಆಲ್ ರೌಂಡರ್ ಬೆನ್ ಸ್ಟೋಕ್ಸ್ (ಅಜೇಯ 107) ಶತಕ ಹಾಗೂ ಸಂಜು ಸ್ಯಾಮ್ಸನ್ (ಅಜೇಯ 54) ಅರ್ಧಶತಕ ಇವರುಗಳ ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈ ನೀಡಿದ್ದ ಗುರಿ ಬೆನ್ನತ್ತಿದ ರಾಜಸ್ಥಾನ 18.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 196 ರನ್ ಗುರಿ ತಲುಪಿದೆ.

ರಾಜಸ್ಥಾನ ಪರ ಉತ್ತಪ್ಪ 13, ಬೆನ್ ಸ್ಟ್ರೋಕ್ಸ್ 107, ಸ್ಮಿತ್ 11 ಹಾಗೂ ಸಂಜು ಸ್ಯಾಮ್ನ್ಸನ್ ಅಜೇಯ 54 ರನ್ ಗಳಿಸಿದ್ದರು.

ಮುಂಬೈ ಪರ ಜೇಮ್ಸ್ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.

ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ಗೆ 195 ರನ್ ಗಳಿಸಿತ್ತು. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿಕಾಕ್ (6) ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಂಕಾದರು. ಎರಡನೇ ವಿಕೆಟ್ ಗೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಂಡಕ್ಕೆ 83 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು.  ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (60 ಅಜೇಯ) ಇವರ ಸ್ಫೋಟಕ ಬ್ಯಾಟಿಂಗ್ ನೆರವಿನ ಕಾರಣ ಮುಂಬೈ ಈ ಸವಾಲಿನ ಮೊತ್ತ ಪೇರಿಸುವಂತಾಗಿತ್ತು.

Stay up to date on all the latest ಕ್ರಿಕೆಟ್ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp