ಕ್ರಿಕೆಟ್ ನಿಂದ ನಿವೃತ್ತಿ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಆಸ್ಟ್ರೇಲಿಯಾದ ಮಾಜಿ ಬೌಲರ್

2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗಿ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಹೇಳಿಕೊಂಡಿದ್ದಾರೆ.
ಮಿಚೆಲ್ ಜಾನ್ಸನ್
ಮಿಚೆಲ್ ಜಾನ್ಸನ್

ಸಿಡ್ನಿ: 2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗಿ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಹೇಳಿಕೊಂಡಿದ್ದಾರೆ.

ವೃತ್ತಿ ಜೀವನದ ಮೂಲಕ ಮಾನಸಿಕ ಖಿನ್ನತೆ ಸಮಸ್ಯೆಯನ್ನು ನಿಭಾಯಿಸಿಕೊಂಡಿದ್ದು, ಈಗ ಇತರ ವಿಷಯಗಳ ಕಡೆಗೆ ಗಮನ ಹರಿಸಿರುವುದಾಗಿ ಅವರು ಆಸ್ಟ್ರೇಲಿಯಾದ ಚಾನಲ್ ವೊಂದಕ್ಕೆ ಅವರು ತಿಳಿಸಿದ್ದಾರೆ.

73 ಟೆಸ್ಟ್ ಗಳಲ್ಲಿ  313 ವಿಕೆಟ್ ಪಡೆದು ಕೊಂಡಿರುವ ಜಾನ್ಸನ್ 2015ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ಆದರೆ, ಐಪಿಎಲ್ ಹಾಗೂ ಬಿಗ್ ಬಾಸ್ ನಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ.

ಅನೇಕ ಸಲ ಆತ್ಮ ವಿಶ್ವಾಸದಿಂದ ಹೋರಾಡಿದ್ದು, ಎರಡು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವುದಾಗಿ ಸಂಪೂರ್ಣವಾಗಿ ಬದಲಾಗಿರುವುದಾಗಿ 38 ವರ್ಷದ ಮಿಚೆಲ್ ಜಾನ್ಸನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com