ಆಸ್ಟ್ರೇಲಿಯಾ ಪ್ರವಾಸ: ಆಟಗಾರರೊಂದಿಗೆ ಕುಟುಂಬ ಸಹ ಪ್ರಮಾಣಿಸಲು ಅವಕಾಶ ನೀಡಲಿಯೆಂದು ಆಸಿಸುತ್ತೇನೆ: ಗಂಗೂಲಿ

ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಜೊತೆ ಅವರ ಕುಟಂಬ ಸಹ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಆಸಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಜೊತೆ ಅವರ ಕುಟಂಬ ಸಹ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಆಸಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 

ಎರಡು ಕ್ರಿಕೆಟ್ ಮಂಡಳಿಗಳ ವೈದ್ಯಕೀಯ ಸಿಬ್ಬಂದಿ - ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) - ಕ್ವಾರಂಟೈನ್ ನಿಯಮಗಳು ಮತ್ತು ತರಬೇತಿಗಳಂತಹ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೊಡಗಿವೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್(ಎಸ್‌ಎಂಹೆಚ್) ನಲ್ಲಿನ ವರದಿಯ ಪ್ರಕಾರ, ಕ್ಯಾರೆಂಟೈನ್ ಅವಧಿಯ ಬಗ್ಗೆ ಟೀಂ ಇಂಡಿಯಾದಲ್ಲಿ ಗೊಂದಲವಿದೆ ಮತ್ತು ಆಟಗಾರರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆಯೇ ಎಂದು ಹೇಳಿದೆ.

ಪ್ರಸ್ತುತ ಐಪಿಎಲ್ 13ನೇ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯುತ್ತಿದ್ದು ಫೈನಲ್ ನಂತರ ಟೀಂ ಇಂಡಿಯಾ ಆಟಗಾರರು ಸಿಡ್ನಿಗೆ ತೆರಳಿದ್ದಾರೆ. ಇನ್ನು ಸಿಡ್ನಿಗೆ ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸಬಹುದೇ ಎಂಬ ಬಗ್ಗೆ ಆಟಗಾರರಲ್ಲಿ ಗೊಂದಲವಿದೆ ಎಂದು ಭಾರತೀಯ ತಂಡಕ್ಕೆ ಹತ್ತಿರವಾದ ಮೂಲಗಳು ತಿಳಿಸಿವೆ.

ಸಿಡ್ನಿಯಲ್ಲೂ ಆಟಗಾರರು 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಬೇಕಿದೆ. ಕೆಲವು ಆಟಗಾರರು ತಮ್ಮ ಹೆಂಡತಿ ಮತ್ತು ಮಕ್ಕಳು ಜೊತೆಗೆ ಪ್ರಯಾಣಿಸಲಿ ಎಂದು ಬಯಸುತ್ತಾರೆ. ಇನ್ನು ಕುಟುಂಬಗಳು ಹೋಟೆಲ್‌ಗಳಲ್ಲಿ ಸಿಲುಕಿಕೊಂಡರೆ ಸಾಮಾನ್ಯ ಜೀವನವು ತುಂಬಾ ಕಷ್ಟಕರವಾಗಿರುತ್ತದೆ ಎಂದು ಇತರ ಆಟಗಾರರು ನಂಬುತ್ತಾರೆ  ಎಂದು ಎಸ್‌ಎಂಹೆಚ್‌ನಲ್ಲಿನ ವರದಿಯಲ್ಲಿ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬಗಳನ್ನು ಆಟಗಾರರೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಿ ಎಂದು ಆಶಿಸುತ್ತಿದ್ದೇನೆ. ಆದರೆ 'ಇದನ್ನು ಗೇಮ್ ಬ್ರೇಕರ್ ಎಂದು ಪರಿಗಣಿಸುವುದಿಲ್ಲ ಎಂದರು.

ನವೆಂಬರ್ 27 ಮತ್ತು ಜನವರಿ 19ರ ನಡುವೆ ನಡೆಯಲಿರುವ ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳಿಗಾಗಿ ಭಾರತ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com