ಭಾರತ vs ಆಸ್ಟ್ರೇಲಿಯಾ: ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್, ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್!

ಕೊರೋನಾ ಹಿನ್ನೆಲೆಯಲ್ಲಿ ಮೆಲ್ಬರ್ನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಒಂದಾದರೂ ಪಂದ್ಯ ನಡೆಯಲಿದೆಯಾ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು ಬಾಕ್ಸಿಂಗ್ ಡೇ ಪಂದ್ಯ ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲೇ ನಡೆಯಲಿದೆ.
ಟೀಂ-ಇಂಡಿಯಾ
ಟೀಂ-ಇಂಡಿಯಾ

ಸಿಡ್ನಿ: ಕೊರೋನಾ ಹಿನ್ನೆಲೆಯಲ್ಲಿ ಮೆಲ್ಬರ್ನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಒಂದಾದರೂ ಪಂದ್ಯ ನಡೆಯಲಿದೆಯಾ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು ಬಾಕ್ಸಿಂಗ್ ಡೇ ಪಂದ್ಯ ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲೇ ನಡೆಯಲಿದೆ.

ತಿಂಗಳುಗಳ ನಂತರ ಮೆಲ್ಬರ್ನ್ ನಲ್ಲಿ ಕೊರೋನಾ ಲಾಕ್ ಡೌನ್ ತೆರವುಗೊಳಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಮೆಲ್ಬರ್ನ್ ನಲ್ಲೇ ನಡೆಯಲಿದೆ. ಇನ್ನು ಟೆಸ್ಟ್ ಪಂದ್ಯದ ಮೊದಲ ಪಂದ್ಯ ಅಡಿಲೇಡ್ ನಲ್ಲಿ ನಡೆಯಲಿದೆ. 

ಕೊರೋನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನವೆಂಬರ್ 12ಕ್ಕೆ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದೆ. ಇನ್ನು ಅಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿ ನಂತರ ನವೆಂಬರ್ 27ರಿಂದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. 

ಭಾರತ ಆಸ್ಟ್ರೇಲಿಯಾ ಪ್ರವಾಸ:
ಏಕದಿನ ಸರಣಿ
ನ. 27 - ಮೊದಲ ಏಕದಿನ ಪಂದ್ಯ(ಸಿಡ್ನಿ, ಹಗಲು-ರಾತ್ರಿ ಪಂದ್ಯ)
ನ. 29 - ಎರಡನೇ ಏಕದಿನ ಪಂದ್ಯ(ಸಿಡ್ನಿ, ಹಗಲು-ರಾತ್ರಿ ಪಂದ್ಯ)
ಡಿ. 2 - ಮೂರನೇ ಏಕದಿನ ಪಂದ್ಯ(ಕ್ಯಾನ್ಬೆರಾ, ಹಗಲು-ರಾತ್ರಿ ಪಂದ್ಯ)

ಟಿ20 ಸರಣಿ
ಡಿ. 4 - ಮೊದಲ ಟಿ20 ಪಂದ್ಯ(ಕ್ಯಾನ್ಬೆರಾ, ರಾತ್ರಿ ಪಂದ್ಯ)
ಡಿ. 6 - ಎರಡನೇ ಟಿ20 ಪಂದ್ಯ(ಸಿಡ್ನಿ, ರಾತ್ರಿ ಪಂದ್ಯ)
ಡಿ. 8 - ಮೂರನೇ ಟಿ20 ಪಂದ್ಯ(ಸಿಡ್ನಿ, ರಾತ್ರಿ ಪಂದ್ಯ)

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ
ಡಿ. 17-21 - ಮೊದಲ ಟೆಸ್ಟ್ ಪಂದ್ಯ(ಅಡಿಲೇಡ್, ಹಗಲು-ರಾತ್ರಿ ಪಂದ್ಯ)
ಡಿ. 26-30 - ಎರಡನೇ ಟೆಸ್ಟ್ ಪಂದ್ಯ(ಮೆಲ್ಬರ್ನ್)
ಜ. 7-11 - ಮೂರನೇ ಟೆಸ್ಟ್ ಪಂದ್ಯ(ಸಿಡ್ನಿ)
ಜ. 15-19 - ನಾಲ್ಕನೇ ಟೆಸ್ಟ್ ಪಂದ್ಯ(ಬ್ರಿಸ್ಬೆನ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com