ಐಪಿಎಲ್ 13ನೇ ಆವೃತ್ತಿ: ಆಟಗಾರರಿಗೆ ಕೋವಿಡ್-19 ಭೀತಿ ಕಾಡುವುದಿಲ್ಲ- ಗಂಭೀರ್ ವಿಶ್ವಾಸ

ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಕಾರ್ಯಕ್ಷಮತೆ ಮೇಲೆ ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಕಾರ್ಯಕ್ಷಮತೆ ಮೇಲೆ ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಕೋವಿಡ್-19 ಮಾರ್ಗಸೂಚಿಗಳನ್ನು ಆಟಗಾರರು ಚಾಚು ತಪ್ಪದೇ ಪಾಲಿಸಬೇಕೆಂದು ದೆಹಲಿ ಕ್ಯಾಪಿಟಲ್ಸ್  ತಂಡದ ಮಾಜಿ ಕ್ಯಾಪ್ಟನ್  ಒತ್ತಾಯಿಸಿದ್ದಾರೆ.

ಕೋವಿಡ್-19ಗೆ ಆಟಗಾರರು ಹೆದರುತ್ತಾರೆ ಎಂಬುದು ನನ್ನಗೆ ಅನ್ನಿಸುತ್ತಿಲ್ಲ. ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯಂತ ಪ್ರಮುಖವಾಗಿದೆ. ಒಬ್ಬ ವ್ಯಕ್ತಿಯ ಕಾರಣದಿಂದಾಗಿ ಇಡೀ ಟೂರ್ನಿಯನ್ನು  ಹಾಳು ಮಾಡಬಾರದು, ಆದ್ದರಿಂದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವುದು ಮುಖ್ಯವಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ಗೌತಮ್ ಗಂಭೀರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೂ ಯುಎಇ, ಅಬುದಾಬಿ, ಶಾರ್ಜಾ ಮತ್ತು ದುಬೈನಲ್ಲಿ ಐಪಿಎಲ್ 13ನೇ ಆವೃತ್ತಿಯ ಲೀಗ್ ಪಂದ್ಯಗಳು ನಡೆಯಲಿವೆ.

ದೆಹಲಿ ಕ್ಯಾಪಿಟಲ್ ಟೂರ್ನಿ ಗೆಲ್ಲುವ ಕುರಿತಂತೆ ಪ್ರತಿಕ್ರಿಯಿಸಿದ ಗೌತಮ್, ಯಾವುದರ ಬಗ್ಗೆಯೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದ ಅವರು, ಸಾಂಕ್ರಾಮಿಕ ರೋಗದ ಕಾರಣ ಆಟಗಾರರು ಧೀರ್ಘ ಕಾಲದಿಂದ ಆಟ ವಾಡದಿರುವ ಬಗ್ಗೆಯೂ ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com