ಐಪಿಎಲ್ 2020: ಸೈನ್ ರೈಸರ್ಸ್ ವಿರುದ್ಧ 10 ರನ್ ಗಳಿಂದ ಗೆಲುವು ಸಾಧಿಸಿ ಆರ್ ಸಿಬಿ ಶುಭಾರಂಭ

ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2020 ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ  ರಾಯಲ್ ಚಾಲೆಂಜರ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ.

Published: 21st September 2020 11:49 PM  |   Last Updated: 22nd September 2020 12:11 PM   |  A+A-


RCB_Team1

ಕೊಹ್ಲಿ ನೇತೃತ್ವದ ಆರ್ ಸಿಬಿ ಆಟಗಾರರು

Posted By : Nagaraja AB
Source : Online Desk

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2020 ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ  ರಾಯಲ್ ಚಾಲೆಂಜರ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ.

ಸೈನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು 19. 4 ಓವರ್ ಗಳಲ್ಲಿ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾದ  ಆರ್ ಸಿಬಿ ಶುಭಾರಂಭ ಮಾಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಅವರ ಆಕರ್ಷಕ 56 ಮತ್ತು ಎಬಿ ಡಿವಿಲಿಯರ್ಸ್ 51, ಹಾಗೂ ಆರೋನ್ ಫಿಂಚ್ ಅವರ 29 ರನ್ ಗಳ ನೆರವಿನಿಂದ 160ರ ಗಡಿ ದಾಟಲು ತಂಡ ಯಶಸ್ವಿಯಾಯಿತು.

ಈ ಗುರಿ ಬೆನ್ನತ್ತಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಪರ ಜಾನಿ ಬೇರ್ಸ್ಟೋವ್ 61, ಮನೀಶ್ ಪಾಂಡೆ,  ಪ್ರಿಯಮ್ ಗರ್ಗ್ 12 ರನ್ ಗಳಿಸುವ ಮೂಲಕ 19. 4 ಓವರ್ ಗಳಲ್ಲಿ 153 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.ಯಜುವೇಂದ್ರ ಚಹಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

 

Stay up to date on all the latest ಕ್ರಿಕೆಟ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp