ಟಾಮ್ ಕರನ್‌ ಔಟ್‌ ಸಂಬಂಧದ ತೀರ್ಪಿನ ಬಗ್ಗೆ ಸಾಕ್ಷಿ ಧೋನಿ ಅಸಮಾಧಾನ, ಟ್ವೀಟ್ ಡಿಲೀಟ್!

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ ನಡುವಿನ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 4ನೇ ಪಂದ್ಯದಲ್ಲಿ ತೀರ್ಪುಗಾರರ ನಿರ್ಧಾರದ ಸಿಎಸ್‌ಕೆ ನಾಯಕ ಎಂಎಎಸ್‌ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಗರಂ ಆಗಿದ್ದರು.
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ ನಡುವಿನ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 4ನೇ ಪಂದ್ಯದಲ್ಲಿ ತೀರ್ಪುಗಾರರ ನಿರ್ಧಾರದ ಸಿಎಸ್‌ಕೆ ನಾಯಕ ಎಂಎಎಸ್‌ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಗರಂ ಆಗಿದ್ದರು.

18ನೇ ಓವರ್‌ನಲ್ಲಿ ದೀಪಕ್‌ ಚಹರ್‌ ಶಾರ್ಟ್ ಎಸೆತ ಹಾಕಿದ್ದರು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಟಾಮ್‌ ಕರನ್‌ ಫುಲ್‌ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ತೊಡೆಗೆ ತಾಗಿ ಪಿಚ್‌ ಆಗಿ ನಂತರ ವಿಕೆಟ್‌ ಕೀಪರ್‌ ಧೋನಿ ಕೈಗೆ ಸೇರಿತ್ತು. ಇದನ್ನು ಅಂಪೈರ್‌ಗಳು ವಿಕೆಟ್‌ ಕೀಪರ್‌ ಕ್ಯಾಚ್‌ ಎಂದು ತೀರ್ಪು ನೀಡಿದರು. ಈ ವೇಳೆ ಅಂಪೈರ್‌ಗಳು ಹಾಗೂ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ನಡುವೆ ಹೈಡ್ರಾಮ ನಡೆಯಿತು.

ಎಂಎಸ್‌ ಧೋನಿ ಕ್ಯಾಚ್‌ ಅಫೀಲ್‌ ಮಾಡಿದ್ದಕ್ಕೆ ಅಂಪೈರ್‌ ಔಟ್‌ ಎಂದು ನಿರ್ಧರಿಸಿದ್ದು, ಟಾಮ್ ಕರನ್‌ಗೆ ಅಚ್ಚರಿ ಉಂಟಾಗಿತ್ತು. ರಾಜಸ್ಥಾನ್‌ ರಾಯಲ್ಸ್‌ ಡಿಆರ್‌ಎಸ್‌ ಎಲ್ಲ ರಿವ್ಯೂವ್‌ಗಳನ್ನು ಖಾಲಿ ಮಾಡಿತ್ತು. ಆದರೆ, ಟಾಮ್‌ ಕರನ್‌ ಅಂಪೈರ್‌ಗಳ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿದರು. ನಂತರ, ಮೂರನೇ ಅಂಪೈರ್‌ಗೆ ಸೂಚಿಸಿದ ಬಳಿಕ ವಿಡಿಯೋ ರೀಪ್ಲೆಯಲ್ಲಿ ಔಟ್‌ ಇಲ್ಲವೆಂಬ ಬಗ್ಗೆ ತೀರ್ಪುಗಾರರಿಗೆ ಮನವರಿಕೆಯಾಗಿತ್ತು.

ಇದಾದ ಬಳಿಕ ಟಾಮ್‌ ಕರನ್‌ ಅವರನ್ನು ಮತ್ತೆ ಬ್ಯಾಟಿಂಗ್‌ ಮಾಡಲು ಅಂಪೈರ್‌ಗಳು ಅನುಮತಿ ನೀಡಿದ್ದರಿಂದ. ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್‌ ಧೋನಿ, ಅಂಪೈರ್‌ಗಳ ತೀರ್ಪು ಬದಲಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮೈದಾನದಲ್ಲಿ ಉಂಟಾಗಿದ್ದ ಈ ಹೈಡ್ರಾಮದ ಬಗ್ಗೆ ಸಾಕ್ಷಿ ಧೋನಿಗೆ ಅಸಮಾಧಾನ ಉಂಟಾಗಿತ್ತು. ಹಾಗಾಗಿ, ತಮ್ಮ ಅಸಮಾಧಾನ ಹೊರಹಾಕಲು ಅವರು ಹೆಚ್ಚು ಸಮಯ ಕಾಯಲಿಲ್ಲ. ತಕ್ಷಣ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪಂದ್ಯದ ಅಂಪೈರ್‌ಗಳ ವಿರುದ್ದ ಕಿಡಿಕಾರಿದರು.

ನೀವು ತಂತ್ರಜ್ಞಾನವನ್ನು ಬಳಿಸಿಕೊಳ್ಳುವುದಾದರೆ, ಅದನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳಿ... ಔಟ್‌ ಅಂದರೆ ಔಟ್‌, ಕ್ಯಾಚ್ ಆಗಲಿ ಅಥವಾ ಎಲ್‌ಬಿಡಬ್ಲ್ಯು ಆಗಲಿ.. ಎಂದು ಸಾಕ್ಷಿ ಧೋನಿ ಟ್ವೀಟ್‌ ಮಾಡಿದ್ದರು. ಇದಾದ ಕೆಲ ಸಮಯದ ಬಳಿಕ ಅವರು ತಮ್ಮ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com