ಆರಂಭಿಕನಾಗಿ ತಂಡವನ್ನು ಗೆಲುವಿನತ್ತ ಸಾಗಿಸುವುದು ತುಂಬಾ ಮುಖ್ಯ: ಶುಭಮನ್‌ ಗಿಲ್

ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಶುಭಮನ್‌ ಗಿಲ್‌, ಎದುರಾಳಿ ತಂಡದ ವಿರುದ್ಧ ಬೌಲರ್ ಎದುರು ಆಡುವುದು ಎಲ್ಲಾ ಆರಂಭಿಕರಿಗೂ ತುಂಬಾ ಮುಖ್ಯ ಎಂದು ಹೇಳಿದರು.

Published: 27th September 2020 04:00 PM  |   Last Updated: 27th September 2020 04:00 PM   |  A+A-


Shubhman Gill disappointed to not be included for Windies tour

ಶುಭ್ ಮನ್ ಗಿಲ್

Posted By : Srinivas Rao BV
Source : Online Desk

ಅಬುಧಾಬಿ: ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಶುಭಮನ್‌ ಗಿಲ್‌, ಎದುರಾಳಿ ತಂಡದ ವಿರುದ್ಧ ಬೌಲರ್ ಎದುರು ಆಡುವುದು ಎಲ್ಲಾ ಆರಂಭಿಕರಿಗೂ ತುಂಬಾ ಮುಖ್ಯ ಎಂದು ಹೇಳಿದರು.

ಶನಿವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ತೋರಿದ ಕೋಲ್ಕತಾ ನೈಟ್‌ ರೈಡರ್ಸ್, 7 ವಿಕೆಟ್‌ಗಳಿಂದ ಸನ್‌ ರೈಸರ್ಸ್ ಹೈದರಾಬಾದ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ಫ್ರಾಂಚೈಸಿ ನಿಗದಿತ 20 ಓವರ್‌ಗಳಿಗೆ 142 ರನ್‌ ಗಳನ್ನು ಗಳಿಸಿತ್ತು.  ಬಳಿಕ 143 ರನ್‌ಗಳ ಗುರಿ ಹಿಂಬಾಲಿಸಿದ ಕೆಕೆಆರ್‌, 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. 

ಕೆಕೆಆರ್‌ ಪರ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ 62 ಎಸೆತಗಳಲ್ಲಿ 70 ರನ್‌ಗಳನ್ನು ಗಳಿಸಿದರು. ಇಯಾನ್‌ ಮಾರ್ಗನ್‌ 29 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಾರ್ಗನ್‌ ಹಾಗೂ ಗಿಲ್‌ ಜೊಡಿಯು 92 ರನ್‌ಗಳ ಜತೆಯಾಟವಾಡುವ ಮೂಲಕ ಕೆಕೆಆರ್‌ಗೆ ಗೆಲುವು ತಂದು ಕೊಟ್ಟಿತು.

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp